ಹುಬ್ಬಳ್ಳಿ : ಬಿಸಿಯೂಟ ಯೋಜನೆಯ ಅಡುಗೆ ಸಹಾಯಕರಾಗಿರುವ ಹಾಗೂ ವಿವಿಧ ಸಿಕ್ಕಿಂನಲ್ಲಿ ಕೆಲಸ ಮಾಡುವವರಿಗೆ ಕನಿಷ್ಠ ವೇತನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ, ಹುಬ್ಬಳ್ಳಿಯಲ್ಲಿ ಬಿಸಿಯೂಟ ನೌಕರರು ಮತ್ತು ಸಿಕ್ಕಿಂ ನೌಕರರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು.
ಸಿಐಟಿಯು ಸಂಘಟನೆಯ ನೇತೃತ್ವದಲ್ಲಿ ನಗರದ ಹು-ಧಾ ಮಾಹಾನಗರ ಪಾಲಿಕೆಯ ಆವರಣದಲ್ಲಿರು ಎಂಪಿ ಕಚೇರಿ ಬಳಿಯಲ್ಲಿ ಪ್ರತಿಭಟನೆ ಮಾಡಿದ ನೌಕರರ, ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು. ಈಗಾಗಲೇ ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ದಿನದಿಂದ ಹೆಚ್ಚಾಗುತ್ತಿದೆ. ಪ್ರಸ್ತುತ ಬಿಸಿಯೂಟ ಸೇರಿದಂತೆ ವಿವಿಧ ಸ್ಕಿಂ ನಲ್ಲಿ ಕೆಲಸ ಮಾಡುವ ನೌಕರರ ಜೀವನ ನಡೆಸಲು ತುಂಬಾ ಕಷ್ಟವಾಗುತ್ತದೆ. ಹಾಗಾಗಿ ಕೇಂದ್ರ ಸರ್ಕಾರ ಜಾರಿ ಮಾಡುವ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು. 45ನೇ ಭಾರತೀಯ ಕಾರ್ಮಿಕ ಸಮ್ಮೇಳನ ಶಿಫಾರಸ್ಸು ಗಳನ್ನು ಜಾರಿಗೆ ಮಾಡಬೇಕು.
ಜೊತೆಗೆ ಬಿಸಿಯೂಟ್ ನೌಕರರಿಗೆ ಕನಿಷ್ಠ31 ಸಾವಿರ ರೂಪಾಯಿ ಹಾಗೂ ವಿವಿಧ ಸ್ಕಿಂನಲ್ಲಿ ಕೆಲಸ ಮಾಡುವವರಿಗೆ ಮಾಸಿಕ ಪಿಂಚಣಿ 10ಸಾವಿರ ರೂಪಾಯಿ ಜಾರಿ ಮಾಡಬೇಕು ಎಂದು ಅಗ್ರಹಿಸಿ, ಧಾರವಾಡ ಸಂಸದರ ಮೂಲಕ ಪ್ರಾಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದರು. ಜೊತೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಹಿಂದೆ ನೀಡಿದ ಭರವಸೆಯಂತೆ ಬಿಸಿಯೂಟ್ ನೌಕರರಿಗೆ 6 ಸಾವಿರ, ಅಗಂನವಾಡಿ ನೌಕರರಿಗೆ 15 ಸಾವಿರ ವೇತನ ಜೊತೆಗೆ ನಿವೃತ್ತಿ ಸೌಲಭ್ಯ ಜಾರಿ ಮಾಡಬೇಕು ಎಂದು ಒತ್ತಾಯ ಮಾಡಿದರು.