ಹುಬ್ಬಳ್ಳಿ : ಸಂಚಾರಿ ಕುರಿಗಾಯಿಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿಯೋರ್ವ ಅವಾಜ್ ಹಾಕಿದಲ್ಲದೆ, ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡಿತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸುಳ್ಳಿಕಟ್ಟಿ ಗ್ರಾಮದ ವ್ಯಾಪ್ತಿಗೆ ಬರುವ, ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ಅರಣ್ಯ ಪ್ರದೇಶದಲ್ಲಿ ಕುರಿಗಳನ್ನು ಮೇಯಿಸಲು ಹಣಕ್ಕೆ ಬೇಡಿಕೆ ಇಡುವದರ ಜೊತೆಗೆ ದಬ್ಬಾಳಿಕೆ ಮಾಡಿದ್ದಾರೆ ಎಂದು ಕುರಿಗಾಯಿ ಅಳಲು ತೋಡಿಕೊಂಡಿದ್ದಾನೆ.
ಆನಂದ ಮಂಗಣ್ಣವರ ಎಂಬ ಅರಣ್ಯ ಇಲಾಖೆ ಅಧಿಕಾರಿಯೇ ಹಣ ಮತ್ತು ಕುರಿಗಳ ಬೇಡಿಕೆಯಿಟ್ಟವರಾಗಿದ್ದಾರೆ. ಗೌಳಿಯವರು ದನ ಮೇಯಿಸಲು ನನಗೆ ಹಣ ಮತ್ತು ಕೋಳಿಯನ್ನ ಕೊಡುತ್ತಾರೆ. ನೀನು ಸಹ ನನಗೆ ವರ್ಷಕ್ಕೆ ಇಂತಿಷ್ಟು ಹಣವನ್ನ ಕೂಡಲೇಬೇಕು. ನೀ ಹಣ ಕೊಡದೆ ಹೋದ್ರೆ ಇತ್ತ ಎಲ್ಲಿಯೂ ಕಾಣಿಸಿಕೊಳ್ಳಬೇಡ ಎಂದು ಅರಣ್ಯ ಇಲಾಖೆ ಅಧಿಕಾರಿ ಕುರಿಗಾಯಿಗೆ ಆವಾಜ ಹಾಕಿದ್ದಾನೆ. ಅರಣ್ಯ ಇಲಾಖೆ ಸಿಬ್ಬಂದಿ ಹಣದ ಬೇಡಿಕೆ ಇಟ್ಟ ಮಾತುಗಳನ್ನು ತನ್ನ ಮೊಬೈಲ್‌ನಲ್ಲಿ ಕುರಿಗಾಯಿ ಬೀರಪ್ಪ ಸೆರೆಹಿಡಿದಿದ್ದಾನೆ. ಕೇವಲ ಹಣ ಅಷ್ಟೇ ಅಲ್ಲದೇ ಕುರಿಗಳನ್ನು ಅರ್ಧ ಬೆಲೆಗೆ ಕೊಡಬೇಕಂತೆ. ಕೇಳಿದಷ್ಟು ಹಣ ಮತ್ತು ಕುರಿ ಕೊಡದೆ ಹೋದ್ರೆ ಎಫ್‌ಐಆರ್ ಮಾಡುತ್ತೇನೆ ಎಂದು ಧಮ್ಕಿ ಹಾಕಿದ್ದು, ಈ ರೀತಿಯ ದಿನನಿತ್ಯದ ಕಿರುಕುಳಕ್ಕೆ ಬೇಸತ್ತು ಸುಸ್ತಾಗಿ ಕುರಿಗಾಯಿ ವಿಡಿಯೋ ವೈರಲ್ ಮಾಡಿದ್ದಾನೆ.