ಹುಬ್ಬಳ್ಳಿ: ಕೇಂದ್ರದಿಂದ ನಮ್ಮ ರಾಜ್ಯಕ್ಕೆ ಅನ್ಯಾಯ ಆಗ್ತಿದೆ. ಬರಗಾಲ ಬಂದಾಗ ಅನುದಾನ ಕೊಡಲಿಲ್ಲ. ರಾಜ್ಯದ BJP ಸಂಸದರು ದ್ವನಿ ಎತ್ತಲಿಲ್ಲ ಎಂದು DCM ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಡಿಸಿಎಂ, ಒಂಚೂರು ಅನುದಾನ ಕೊಡಲಿಲ್ಲ, ನೀರಾವರಿಗೆ 5,200 ಕೋಟಿ ಅನುದಾನ ಘೋಷಣೆ ಮಾಡಿತ್ತು. ಒಂದು ರೂಪಾಯಿ ಹಣವೂ ಬರಲಿಲ್ಲ. ನಾವು ಕಾಯ್ದಿದ್ದೇವೆ, ಈಗ ವಿಧಿ ಇಲ್ಲ. ನಾವು ಧ್ವನಿ ಎತ್ತಬೇಕು, ರಾಜ್ಯದ ಹಿತ ಕಾಪಾಡಬೇಕು. ಹೀಗಾಗಿ ನಾನು ಸಿಎಂ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ ನಡೆಸಿ ಮಾತಾಡ್ತೀವಿ, ದೆಹಲಿಯಲ್ಲಿ ಹೋರಾಟ ಮಾಡ್ತೀವಿ ಎಂದಿದ್ದಾರೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮನಸ್ಸು ಮಾಡಿದ್ರೆ ರಾಜ್ಯಕ್ಕೆ ಏನೆಲ್ಲಾ ಕೊಡಿಸಬಹುದು. ನಮ್ಮ ಸರ್ಕಾರ ಬಿಡಿ, ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಏನ್ ಮಾಡಿದ್ರಿ ಅಂತ ಹೇಳಲಿ ಎಂದು ಪ್ರಶ್ನಿಸಿದ್ದಾರೆ. ಬರಗಾಲಕ್ಕಾಗಿ ಕೇಂದ್ರ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಬರಗಾಲದ ಹಣವನ್ನು ನಾವು ರಾಜ್ಯ ಸರ್ಕಾರದಿಂದ ಕೊಟ್ಟಿದ್ದೇವೆ. ಬೋರ್‌ವೆಲ್ ಕೊರೆಯೋಕೆ ಡಿಸಿ ಅವರಿಗೆ ಹೇಳಿದ್ದೇವೆ. ನೀರಿನ ಸಮಸ್ಯೆ ಆಗದಂತೆ ಸೂಚನೆ ಕೊಟ್ಟಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.