ಹುಬ್ಬಳ್ಳಿ : ಮಹಿಳೆ ಬ್ರೇನ್ ವಾಶ್ ಮಾಡಿ ಅಕೌಂಟ್ ನಿಂದ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದ ನಕಲಿ ಫಾದರ್ಗೆ ಥಳಿಸಿರುವ ಘಟನೆ ಹುಬ್ಬಳ್ಳಿಯ ಹೆಗ್ಗರಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಹೆಗ್ಗರಿಯ ನಿವಾಸಿ ಸಂತೋಷ ಗಂಧದ ನಕಲಿ ಫಾದರ್. ನವೀನ್ ಮತ್ತು ಫ್ರೆನಿ ದಂಪತಿಗಳು ನಗರದ ಮಿಷನ್ ಕಾಪೌಂಡ್ ನಲ್ಲಿ ವಾಸವಾಗಿದ್ದರು. ನವೀನ್ ಮತ್ತು ಫ್ರೆನಿಗೆ ಕಳೆದ 16 ವರ್ಷಧ ಹಿಂದೆಯೇ ಮದುವೆಯಾಗಿದ್ದರು. 6 ವರ್ಷದ ಹಿಂದೆ ಒಳಗುಂದಿ ಕುಟುಂಬಕ್ಕೆ ಸಂತೋಷ ಎಂಬ ಕ್ರೈಸ್ತ ಪಾದ್ರಿ ಪರಿಚಯನಾಗಿದ್ದನು. ಎರಡು ವರ್ಷದ 2 ವರ್ಷಗಳ ಹಿಂದೆಯಿಂದ ಫ್ರೆನಿಯೊಂದಿಗೆ ಸಲಿಗೆ ಬೆಳೆಸಿ ದ್ದಾನೆ. ಗುಟ್ಟು ಗುಟ್ಟಾಗಿ ಫಾದರ್ ಮತ್ತು ಫ್ರೆನಿ ಭೇಟಿಯಾಗುತ್ತಿದ್ರು. ಇಂದು ತಿಂಗಳಿಂದ ಫ್ರೆನಿ ಪತಿ ನವೀನ್ನೊಂದಿಗೆ ದೂರವಿದ್ದಾರೆ.
ಸದ್ಯ ಪತಿ ನವೀನ್ಗೆ ವಿಚ್ಛೇದನ ಕೊಡಲು ಫ್ರೆನಿ ಮುಂದಾಗಿದ್ದಾರೆ. ನನ್ನ ಪತ್ನಿ ಫ್ರೆನಿಯನ್ನು ಫುಸಲಾಯಿಸಿದ್ದು, ವಿಚ್ಛೇದನಕ್ಕೆ ಆತನೇ ಕಾರಣ ಎಂದು ನವೀನ್ ಆರೋಪ ಮಾಡಿದ್ದಾರೆ. ಈ ಬಗ್ಗೆ ಹಲವು ಬಾರಿ ಹಿರಿಯರ ನಡುವೆ ಸಂಧಾನ ನಡೆದಿದೆ.
ಸಂತೋಷ್ ಮತ್ತು ಫ್ರೆನಿಗೆ ನವೀನ್ ಹಾಗೂ ನವೀನ್ ಸಹೋದರ ತಿಳಿ ಹೇಳುವ ಪ್ರಯತ್ನ ಮಾಡುತ್ತಿದ್ದರು. ಈ ವೆಳೆ ಮಾತಿಗೆ ಮಾತು ಬೆಳೆದಿದೆ. ಆಗ ನವೀನ್ ಹಾಗೂ ನವೀನ್ ಸಹೋದರ ನಕಲಿ ಫಾದರ್ ಸಂತೋಷ್ಗೆ ಥಳಿಸಿದ್ದಾರೆ. ಹಲ್ಲೆ ಹಿನ್ನೆಲೆ ಸಂತೋಷ ಹಳೆಹುಬ್ಬಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.