ಹುಬ್ಬಳ್ಳಿ ; ಪಡಿತರ ಅಕ್ಕಿಯನ್ನು ಅಕ್ರಮವಾಗಿ ಖರೀದಿ ಮಾಡಿ ಸಾಗಿಸುತ್ತಿದ್ದ ಲಾರಿ ಸಮೇತ ಇಬ್ಬರು ಚಾಲಕರನ್ನು ಹಳೇ ಹುಬ್ಬಳ್ಳಿ ಮುಸ್ತಾನಸೋಫಾದ ಕೇಶ್ವಾಪುರದ ಬಳಿ ಹುಬ್ಬಳ್ಳಿಯ ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಬ್ದುಲ್ ಖಾದರ್ ಬಿಜಾಪೂರ, ನವಾಜಖಾನ್ ತರೀನ್ ಬಂಧಿತ ಆರೋಪಿಗಳಾಗಿದ್ದಾರೆ. ಇನ್ನೂ ಬಂಧಿತ ಆರೋಪಿಗಳು ಪಡಿತರ ಫಲಾನುಭವಿಗಳ ಬಳಿಯಲ್ಲಿ ಅತಿ ಕಡಿಮೆ ಬೆಲೆಗೆ ಅಕ್ಕಿ ಖರೀದಿಸಿ, ಹೆಚ್ಚು ಹಣಕ್ಕೆ ಮಾರಾಟ ಮಾಡಲು ಸಂಗ್ರಹಿಸಿದರು ಎನ್ನಲಾಗಿದೆ.
ಸಿಸಿಬಿ ಎಎಸ್‌ಐ ಬಿ. ಎನ್ . ಲಂಗೋಟಿ ಅವರ ತಂಡ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿತರಿಂದ 80 ಪ್ಲಾಸ್ಟಿಕ್ ಚೀಲದಲ್ಲಿ ಸುಮಾರು 81,600 ಮೌಲ್ಯದ ಒಟ್ಟು 24 ಕ್ವಿಂಟಲ್ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆಸಿಕೊಂಡಿದ್ದಾರೆ.