ಹುಬ್ಬಳ್ಳಿ : ಬರಗಾಲ ಪರಿಹಾರ ಸೇರಿದಂತೆ ರಾಜ್ಯದ ಜಿಎಸ್‌ಟಿ ಹಣ ಬಿಡುಗಡೆಗೆ ಅಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆಯೇ, ಬಿಜೆಪಿ ಕಾರ್ಯಕರ್ತರು ಕೇಂದ್ರ ಪರ ಘೋಷಣೆ ಕೋಗಿ ಹೈಡ್ರಾಮ ಸೃಷ್ಟಿ ಮಾಡುದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ನಗರದ ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆಯ ಆವರಣದಲ್ಲಿರೋ ಧಾರವಾಡ ಲೋಕಸಭಾ ಸಂಸದರ ಕಚೇರಿ ಮುಂಭಾಗದಲ್ಲಿ ಕಾಂಗ್ರೆಸ್‌ನ ಎನ ಎಸ್ ಯು ಐ ಘಟಕದ ನೇತೃತ್ವದಲ್ಲಿ ಕೈ ಕಾರ್ಯಕರ್ತರು ಪ್ರತಿಭಟನೆಗೆ ಆಗಮಿಸಿದರು. ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಹಾಗೂ ಜೋಶಿ ಬೆಂಬಲಿಗರು ಬಿಜೆಪಿಣ ಜೈ ಶ್ರೀರಾಮ ಹಾಗೂ ಮೋದಿ ಘೋಷಣೆ ಕೂಗಿ ಕಾಂಗ್ರೆಸ್ ಕಾರ್ಯಕರ್ತರ ಘೋಷಣೆಗಳಿಗೆ ಕೌಟರ್ ನೀಡಿದರು. ಇನ್ನೂ ಪರಿಸ್ಥಿತಿ ಬಿಗಡಾಯಿಸುವ ಮುನ್ಸೂಚನೆ ಸಿಕ್ಕ ಬೆನ್ನಲ್ಲೇ, ಮಧ್ಯ ಪ್ರವೇಶ ಮಾಡಿದ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ಕೆಲ ನಿಮಿಷಗಳ ಕಾಲ ಪ್ರತಿಭಟನೆಗೆ ಅವಕಾಶ ನೀಡಿ ಬಳಿಕ ಕಾರ್ಯಕರ್ತರನ್ನು ತೆರವು ಮಾಡಿದರು. ಪರ ವಿರೋಧ ಘೋಷಣೆ ಜೋರಾಗಿ ಕೇಳಿ ಬಂದಿದ್ದು, ಕೆಲಕಾಲ ಎಂಪಿ ಕಚೇರಿ ಮುಂಭಾಗದಲ್ಲಿ ಹೈಡ್ರಾಮ ಕಂಡು ಬಂದಿತ್ತು.