ಹುಬ್ಬಳ್ಳಿ: ದೇಶದಲ್ಲಿ ಕಳೆದ ಹತ್ತು ವರ್ಷ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟ ಸ್ವಚ್ಛ ಆಡಳಿತ ನೀಡಿದ್ದು, ನಯಾ ಪೈಸೆ ಭ್ರಷ್ಟಾಚಾರ ಮಾಡಿಲ್ಲ ಎಂದು ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಹೇಳಿದರು.
ಧಾರವಾಡದ ಯಲಿವಾಳ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಇಂದು ಬಹಿರಂಗ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿ, ಮೋದಿ ಅವರು ಹತ್ತು ವರ್ಷದ ಆಡಳಿತದಲ್ಲಿ ಭ್ರಷ್ಟಾಚಾರಮುಕ್ತ ಆಡಳಿತ ಕೊಡಲು ಶುರು ಮಾಡಿದ್ದು, ದೇಶದಲ್ಲಿ ಪರಿವರ್ತನೆ ಸಾಧ್ಯವಾಗಿದೆ. ಕೇಂದ್ರ ಸರ್ಕಾರದ ಯಾವುದೇ ಹಂತದಲ್ಲಿ, ರಾಜಕಾರಣದಲ್ಲಿ ಸಹ ಒಂದು ಪೈಸೆ ಭ್ರಷ್ಟಾಚಾರವನ್ನು ನಾವು ಯಾರೂ ಮಾಡಿಲ್ಲ ಎಂದು ಘಂಟಾ ಘೋಷವಾಗಿ ಹೇಳುತ್ತೇವೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಸಂಪುಟದ ಯಾರೊಬ್ಬ ಮಂತ್ರಿಯೂ ಭ್ರಷ್ಟಾಚಾರ ಮಾಡಿದರೆ ಅವತ್ತೇ ಸಂಜೆ ಮನೆಗೆ ಕಳಿಸುತ್ತಾರೆ. ಅಷ್ಟರ ಮಟ್ಟಿಗೆ ಸ್ವಚ್ಛ ಆಡಳಿತ ನೀಡಿದ್ದೇವೆ ಎಂದು ಕೇಂದ್ರ ಮಂತ್ರಿ ಮಂಡಲವನ್ನು ಸಚಿವ ಜೋಶಿ ಸಮರ್ಥಿಸಿಕೊಂಡರು.
ಇನ್ನೂ ಪ್ರಚಾರ ಸಭೆಯಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ, ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಪಕ್ಷದ ಪ್ರಮುಖರಾದ ಸಂತೋಷ್ ಚವಾಣ್, ಲಿಂಗರಾಜ ಪಾಟೀಲ್, ಮಹಾಪೌರರಾದ ವೀಣಾ ಭಾರದ್ವಾಡ, ದತ್ತಮೂರ್ತಿ ಕುಲಕರ್ಣಿ ಪ್ರಹ್ಲಾದ್ ಜೋಶೊಯವರಿಗೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಸಾಥ್ ನೀಡಿದರು.