ಹುಬ್ಬಳ್ಳಿ : ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಅಕ್ರಮವಾಗಿ ದಾಖಲೆ ಇಲ್ಲದ ವಸ್ತುಗಳು ಹಾಗೂ ಹಣದ ಮೇಲೆ ನಿಗಾವಹಿಸಲಾಗಿದೆ. ಹುಬ್ಬಳ್ಳಿಯ ರೈಲ್ವೈ ಆಫೀಸ್ನಲ್ಲಿ ಯಾವುದೇ ಸೂಕ್ತ ದಾಖಲೆಗಳಿಲ್ಲದೇ ಎಲೆಕ್ಟ್ರಾನಿಕ್ ವಸ್ತುಗಳು ಸ್ವೀಕೃತವಾಗಿದ್ದು, ಸುಮಾರು ರೂ.8 ಲಕ್ಷ ಮೌಲ್ಯದ 480 ಮಿಕ್ಸರ್ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿ ರೈಲ್ವೇ ನಿಲ್ದಾಣದ ರೈಲ್ವೇ ಪಾರ್ಸಲ್ ಆಫೀಸಿನಲ್ಲಿ ಅನಧಿಕೃತವಾಗಿ ಯಾವುದೇ ಸೂಕ್ತ ದಾಖಲೆಗಳಿಲ್ಲದೇ ಎಲೆಕ್ಟ್ರಾನಿಕ್ ವಸ್ತುಗಳು ಸ್ವೀಕೃತವಾಗಿರುತ್ತದೆ ಎಂಬ ದೂರು ಬಂದಿದ್ದವು. ಚುನಾವಣಾ ಕರ್ತವ್ಯದಲ್ಲಿದ್ದ ವಾಣಿಜ್ಯ ತೆರಿಗೆ ಅಧಿಕಾರಿಗಳು ಮತ್ತು ಫೈಯಿಂಗ್ ಸ್ಕ್ಯಾಡ್ ಅಧಿಕಾರಿಗಳಿಗೆ ಮಾಹಿತಿ ಬಂದ ತಕ್ಷಣ ನಿನ್ನೆ ಸಂಜೆ ಫೈಯಿಂಗ್ ಸ್ಕ್ಯಾಡ್ ಅಧಿಕಾರಿಯಾದ ಬಸವರಾಜ ಚಿತ್ತರಗಿ ರವರು ಸ್ಥಳಕ್ಕೆ ಧಾವಿಸಿ, ಪರಿಶೀಲಿಸಿದ್ದಾರೆ.
ರೈಲ್ವೇ ಪಾರ್ಸಲ್ ಆಫೀಸಿನಲ್ಲಿದ್ದ ವಸ್ತುಗಳನ್ನು ಪರಿಶೀಲಿಸಲಾಗಿ ಒಟ್ಟು 24 ರಟ್ಟಿನ ಬಾಕ್ಸ್ ಗಳಲ್ಲಿ ಸುಮಾರು ರೂ.8 ಲಕ್ಷ ಮೌಲ್ಯದ 480 ಮಿಕ್ಸರ್‍ಗಳು ಸ್ವೀಕೃತವಾಗಿದ್ದು, ಅವುಗಳಿಗೆ ಯಾವುದೇ ಸೂಕ್ತ ದಾಖಲೆಗಳು ಇಲ್ಲದಿರುವುದು ಕಂಡುಬಂದಿದೆ. ಈ ವಸ್ತುಗಳನ್ನು ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ರ ಹಿನ್ನಲೆಯಲ್ಲಿ ಮತದಾರರಿಗೆ ಉಚಿತವಾಗಿ ಹಂಚುವ ಸಲುವಾಗಿ ತರಸಿರಬಹುದು ಎಂದು ಕಂಡುಬಂದಿದ್ದರಿಂದ ವಸ್ತುಗಳನ್ನು ಸೀಜ್ ಮಾಡಿ ಹುಬ್ಬಳ್ಳಿಯ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.