ಹೊಸಪೇಟೆ ಪಟ್ಟಣ ಠಾಣಾ ಪೋಲಿಸರ ಭರ್ಜರಿ ಕಾರ್ಯಾಚರಣೆ, ಗೂಡ್ಸ್ ವಾಹನ ಹಾಗೂ ಟಾಟಾಪಿಕಪ್ ವಾಹನದಲ್ಲಿ ಶ್ರೀ ಗಂಧ ಸಾಗಿಸುತ್ತಿದ್ದ ನಾಲ್ಕು ಜನರು ಪೊಲೀಸ ಬಲೆಗೆ ಬಿದ್ದಿದ್ದಾರೆ. ಹೊಸಪೇಟೆಯ ಸಂಡೂರು ರಸ್ತೆಯಿಂದ ಸೀರಸನಕಲ್ಲು ಮಾರ್ಗವಾಗಿ ಗಂಧದ ತುಂಡುಗಳ ಸಾಗಾಟ ಮಾಡುತ್ತಿದ್ದ ಮಾಹಿತಿ ತಿಳಿದು, ಪೊಲೀಸರು ನಾಲ್ಕು ಜನ ಖತರ್ನಾಕ್ ಕಳ್ಳರನ್ನ ಬಂಧಿಸಿದ್ದಾರೆ.
ಆರೋಪಿಗಳು ಎಲ್ ಗಂಗಾನಾಯ್ಕ್, ಮಹಾಂತೇಶ್, ಎಚ್ ಚೆನ್ನಪ್ಪ, ಹಾಗು ಎಚ್ ರಾಮಣ್ಣ ಎಂದು ಗುರುತಿಸಲಾಗಿದೆ. ಸುಮಾರು 30 ಲಕ್ಷದ 45 ಸಾವಿರ ಮೌಲ್ಯದ ಶ್ರೀಗಂಧ ಸಾಗಿಸುತ್ತಿದ್ದ ಎರಡು ವಾಹನ ಜಪ್ತಿ ಮಾಡಿದ್ದಾರೆ. ಇನ್ನು ಪರಾರಿಯಾಗಿರುವ ಇಬ್ಬರಿಗಾಗಿ ಎಸ್ಪಿ ಬಿ.ಎಲ್ ಶ್ರೀ ಹರಿಬಾಬು, ಅಡಿಷನಲ್ ಎಸ್ಪಿ ಸಲೀಮ್ ಪಾಷಾ, ಶ್ರೀ ಶರಣಬಸವೇಶ್ವರ, ಡಿ.ಎಸ್ಪಿ ಹಾಗೂ ಹೊಸಪೇಟೆ ಪಟ್ಟಣ ಪಿ.ಐ ಹಾಗು ಸಿಬ್ಬಂಧಿ ವರ್ಗ ಅಂತರರಾಜ್ಯ ಕಳ್ಳರ ಪತ್ತೆಗೆ ವಿಶೇಷ ತಂಡ ರಚಿಸಿದ್ದಾರೆ. ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ ಸಿಬ್ಬಂದಿ ವರ್ಗಕ್ಕೆ ಎಸ್ಪಿ ಬಿ.ಎಲ್ ಶ್ರೀ ಹರಿಬಾಬು ಬಹುಮಾನ ಘೋಷಣೆ ಮಾಡಿದ್ದಾರೆ.