ರಾಜ್ಯಸುದ್ದಿ

ಆಕಸ್ಮಿಕ ಅಗ್ನಿ ಅವಘಡ : ಬೆಂಕಿಗಾಹುತಿ ಆದ ಗುಜರಿ ಗೋಡೌನ್

ಹೊಸಕೋಟೆ : ಏಕಾಏಕಿ ನೋಡ ನೋಡ್ತಿದ್ದಂತೆ ಗುಜರಿ ಗೋಡೌನ್​ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಉರಿದ ಘಟನೆ  ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಚಿಕ್ಕನಹಳ್ಳಿ ಗೇಟ್ ಬಳಿ ನಡೆದಿದೆ.

ಪ್ಲಾಸ್ಟಿಕ್ ಸೇರಿದಂತೆ ಕೆಮಿಕಲ್ ಸಂಗ್ರಹಿಸಿದ್ದ ಕಾರಣ ಬೆಂಕಿ ಹೊತ್ತಿಕೊಂಡ ಶಂಕೆ ವ್ಯಕ್ತವಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಬಾನೆತ್ತರಕ್ಕೆ ದಟ್ಟ ಹೊಗೆ ಹಬ್ಬಿದ್ದು, ಅದೃಷ್ಟವಶಾತ್​​ ಭಾರಿ ಅನಾಹುತ ತಪ್ಪಿದೆ.

ಕೆಲ ಕಾಲ ಅಕ್ಕ ಪಕ್ಕದ ಅಂಗಡಿ ಮುಂಗಟ್ಟು ಹಾಗೂ ಜನರಲ್ಲಿ ಆತಂಕ ಮನೆ ಮಾಡಿತ್ತು. ಬೆಂಕಿ ನಂದಿಸಲು ಅಗ್ನಿ ಶಾಮಕ ಸಿಬ್ಬಂದಿಯವರು ಒಂದು ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಟ್ಟರು.

Comments (0)

Your email address will not be published. Required fields are marked *

Back to top button