ಬಿಜೆಪಿ ಪಕ್ಷದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಶಾಸಕ ಎಂ.ಚಂದ್ರಪ್ಪ ಅಸಂಬದ್ದವಾಗಿ ಮಾತನಾಡಿದ ವಿಚಾರವಾಗಿ ಇಂದು ಹೊಳಲ್ಕೆರೆಯಲ್ಲಿ ವಿವಿಧ ಸಮುದಾಯದ ಮುಖಂಡರು ಸಭೆ ನಡೆಸಿದ್ದು, ಶಾಸಕ ಎಂ.ಚಂದ್ರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೆ ಶಾಸಕ ಸ್ಥಾನಕ್ಕೆ ಎಂ.ಚಂದ್ರಪ್ಪ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಬಿಜೆಪಿ ಪಕ್ಷದ ಮುಖಂಡರು ಎಂ.ಚಂದ್ರಪ್ಪ ಇವರನ್ನು ಉಚ್ಚಾಟನೆ ಮಾಡಬೇಕೆಂದು ಆಗ್ರಹಿಸಿದರು. ತಾಲೂಕಿನ ಲಿಂಗಾಯತರು, ಎಸ್ಸಿ ಎಸ್ಟಿ, ಹಿಂದುಳಿದ ಎಲ್ಲಾ ಸಮುದಾಯದವರು ಬಿಎಸ್ ವೈ ಬೆಂಬಲಿಸಿ, ಎಂ.ಚಂದ್ರಪ್ಪ ಅವರಿಗೆ ಮತ ಹಾಕಿದ್ದಿವಿ. ಚಂದ್ರಪ್ಪ ಮುಖ ನೋಡಿ ಅಲ್ಲ ಎಂದು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಲೂಟಿಕೋರ ಚಂದ್ರಪ್ಪ ವಿರುದ್ಧ ಗೋ ಬ್ಯಾಕ್ ಹೋರಾಟ ಕುರಿತು ಚಿಂತನೆ ಮಾಡಲಾಗ್ತಾ ಇದೆ. ಸ್ಥಳೀಯ ಸ್ವಾಭಿಮಾನಕ್ಕಾಗಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ಗೋವಿಂದ ಕಾರಜೋಳ ಬೆಂಬಲಿಸಿ ಹೋರಾಟ ನಡೆಸಲು ತೀರ್ಮಾನ ಮಾಡಲಾಗ್ತಾ ಇದೆ ಎನ್ನಲಾಗ್ತಾ ಇದೆ.