Tuesday, January 27, 2026
24 C
Bengaluru
Google search engine
LIVE
ಮನೆರಾಜಕೀಯಪ್ರಜ್ವಲ್‌ ರೇವಣ್ಣನ ಮಗ ಅಲ್ಲ, ನನ್ನ ಮಗ:ನಾನು ಅಷ್ಟು ಬೇಗ ಸಾಯಲ್ಲ ಎಂದ ಕುಮಾರಸ್ವಾಮಿ

ಪ್ರಜ್ವಲ್‌ ರೇವಣ್ಣನ ಮಗ ಅಲ್ಲ, ನನ್ನ ಮಗ:ನಾನು ಅಷ್ಟು ಬೇಗ ಸಾಯಲ್ಲ ಎಂದ ಕುಮಾರಸ್ವಾಮಿ

ಹಾಸನ; ಲೋಕಸಭಾ ಚುನಾವಣೆಗೆ ಬಿಜೆಪಿ ಜೊತೆಗೆ ಮೈತ್ರಿಯಾಗಿರುವ ಜೆಡಿಎಸ್‌ಗೆ ಈ ಬಾರಿ ಹಾಸನ ಲೋಕಸಭಾ ಕ್ಷೇತ್ರ ಪ್ರತಿಷ್ಠೆಯಾಗಿದೆ. ಈಗಾಗಲೇ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು ಹಾಸನ ಅಭ್ಯರ್ಥಿಯನ್ನಾಗಿ ಪ್ರಜ್ವಲ್‌ ರೇವಣ್ಣ ಅವರನ್ನ ಘೋಷಿಸಿದ್ದು, ದೇವೇಗೌಡ್ರ ಕುಟುಂಬ ಈಗಾಗಲೇ ಚುನಾವಣಾ ಪ್ರಚಾರವನ್ನ ಆರಂಭಿಸಿದೆ.

ಹಾಸನದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರು ಮಾತನಾಡಿ, ಇವನು ರೇವಣ್ಣನ ಮಗ ಅಲ್ಲಾ ನನ್ನ ಮಗ. ಬಹಳಷ್ಟು ಬದಲಾವಣೆ ತರ್ತಿನಿ, ಅವನೂ ಬದಲಾಗುತ್ತಾನೆ
ಎಲ್ಲಾ ರೀತಿಯ ಬದಲಾವಣೆ ತರಲು ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಅವರು ಪ್ರಜ್ವಲ್‌ ರೇವಣ್ಣ ಅವರ ಗೆಲುವಿಗೆ ಶ್ರಮಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.

ರೇವಣ್ಣ ಅವರ ಅಭಿವೃದ್ಧಿ ಕೆಲಸದ ಮುಂದೆ ನಾನು ಇಲ್ಲ. ಆದರೆ ಸ್ವಲ್ಪ ಮುಂಗೋಪ ಬೈಯ್ತಾನೆ. ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ ಅವನನ್ನು ಕ್ಷಮಿಸಿಬಿಡಿ, ನಮ್ಮಲ್ಲಿ ತಪ್ಪುಗಳಾಗಿರಬಹುದು ಆದರೆ ತಿದ್ದುಕೊಳ್ಳಲು ಅವಕಾಶ ಕೊಡಿ. ಜನರು ಕ್ಷಮಿಸುತ್ತಾರೆ ಅದರಲ್ಲಿ ನಂಬಿಕೆ‌ ಇದೆ. ಈ ಪಕ್ಷವನ್ನು ಮುಗಿಸಲು ಹೊರಟಿದ್ದಾರೆ, ದಯವಿಟ್ಟು ಪಕ್ಷ ಉಳಿಸಿಕೊಡಿ, ನನ್ನ ಹತ್ತಿರ ಟನ್‌ಗಟ್ಟಲೆ ದುಡ್ಡು ಇಲ್ಲ. ನಾನು ಆಸ್ತಿ ಸಂಪಾದನೆ ಮಾಡಿಲ್ಲ ನಿಮ್ಮಂತಹ ಲಕ್ಷಾಂತರ ಜನರನ್ನು ಸಂಪಾದಿಸಿದ್ದೇನೆ ಎಂದು ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಭಾವುಕರಾದರು.

ರೇವಣ್ಣನವರೆ ಬೆಳಿಸಿದ ವ್ಯಕ್ತಿ ಪರೋಕ್ಷವಾಗಿ ಎಂದು ಹೇಳಿ ಕೆ.ಎಂ. ಶಿವಲಿಂಗೇಗೌಡರಿಗೆ ಟಾಂಗ್‌ ಕೊಟ್ಟರು.. ಶಿವಲಿಂಗೇಗೌಡ 14 ಮತಗಳಿಂದ ಸೋತ ನಂತರ ರೇವಣ್ಣನವರು ಕೊಟ್ಯಾಂತರ ಹಣ ಗುತ್ತಿಗೆ ಕಾಮಗಾರಿ ನೀಡಿದ್ದು ರೇವಣ್ಣ. ಒಂದು ದಿನ ಶಿವಲಿಂಗೇಗೌಡ ರೇವಣ್ಣನವರ ಬಗ್ಗೆ ಮಾತನಾಡಲಿಲ್ಲ.ಇವತ್ತು ಅಹಂಕಾರ ಬಂದಿದೆ. ಈ ದೇಶದಲ್ಲಿ ಮಹಾನ್ ಆರ್ಥಿಕ ತಜ್ಞ ನಾನೇ ಎಂದು ಬಿಂಬಿಸಿಕೊಳ್ಳಿತ್ತಿದ್ದಾರೆ. 52 ಸಾವಿರ ಕೋಟಿ 5 ಗ್ಯಾರಂಟಿ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. 1 ಲಕ್ಷದ 5 ಸಾವಿರ ಕೋಟಿ ಹಣ ಒಂದೆ ವರ್ಷಗಳಲ್ಲಿ ರಾಜ್ಯ ಸರ್ಕಾರ ಮಾಡಿದೆ. ಅದಕ್ಕೆ ಜಾಹಿರಾತು ಕೊಡುತ್ತಾರೆ. ಸಾಲ ಮಾಡಿ ತುಪ್ಪ ತಿನ್ನುವ ಕೆಲಸ ಮಾಡುತ್ತಿದ್ದಾರೆ.ಎಂದು ಕೇಂದ್ರದ ವಿರುದ್ಧ ಗುಡುಗಿದರು…ಮುಖಂಡರಾದ ಸಂತೋಷ್, ಹೆಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ನಾಗರಾಜು, ಬಿದರಿಕೆರೆ ಜಯರಾಂ, ಗಿರೀಶ್ ಚನ್ನವೀರಪ್ಪ, ಪ್ರಭುಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್. ಶಂಕರ್, ಅಶೋಕ್, ಮಾಧ್ಯಮ ವಕ್ತಾರ ಹೊಂಗೆರೆ ರಘು ಇತರರು ಉಪಸ್ಥಿತರಿದ್ದರು

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments