ಗದಗ: ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿ ನೀಡಿದ್ದ ತಮ್ಮ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಯೂಟರ್ನ್ ಹೊಡೆದಿದ್ದಾರೆ. ಪಾಕಿಸ್ತಾನ ಪರ ಘೋಷಣೆ ಕಾಲ್ಪನಿಕ ಎಂದು ಈ ಹಿಂದೆ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದರು. ಆದರೆ ಈಗ FSL ವರದಿ ನೋಡಿಲ್ಲ, ಗೃಹ ಸಚಿವರು ನೋಡಿದ್ದಾರೆ. FSL ವರದಿ ಬಂದಿದೆ, ಘೋಷಣೆ ಕೂಗಿರಬಹುದು ಅಂದಿದ್ದಾರೆ ಎಂದು ಖರ್ಗೆ ಯೂಟರ್ನ್ ಹೊಡೆದಿದ್ದಾರೆ…
ನನ್ನ ವರದಿ ಸರಿ ಅಂತಾ ಹೇಳುವುದೂ ತಪ್ಪು ಅಂತಾನೇ ಹೇಳಿದ್ದೆ. ನಾನು ಎಫ್ಎಸ್ಎಲ್ ವರದಿ ನೋಡಿಲ್ಲ, ಗೃಹ ಸಚಿವರು ವರದಿ ನೋಡಿ ಹೇಳಿದ್ದಾರೆ. ಎಫ್ಎಸ್ಎಲ್ ರಿಪೋರ್ಟ್ ಬಂದಿದೆ. ಘೋಷಣೆ ಕೂಗಿರಬಹುದು ಅಂತಾ ಹೇಳಿದ್ದಾರೆ. ಮೂವರನ್ನ ಕರೆದುಕೊಂಡು ಹೋಗಿದ್ದಾರೆ.
ವೈಸ್ ಮ್ಯಾಚ್ ಆಗ್ಬೇಕು. ಆ ಸಂದರ್ಭದಲ್ಲಿ ಅವರಿದ್ರಾ ಅಂತಾ ದೃಢಪಡಿಸಿಕೊಳ್ಳಬೇಕು. ಬಿಜೆಪಿಯವರಂತೆ ಮಂಡ್ಯದಲ್ಲಿ ಕೂಗಿದ್ದನ್ನ ಮುಚ್ಚಿಹಾಕಿದ್ದೀವಾ? ಇನ್ನೂ ತನಿಖೆ ನಡೀತಿದೆ, ವೈಸ್ ಸ್ಯಾಂಪಲ್ ಅವ್ರದ್ದು, ಇವ್ರದ್ದು ಅಂತಾ ಎಲ್ಲೂ ಹೇಳಿಲ್ಲ. ಮಾನ್ಯ ಗೃಹ ಸಚಿವರ ಹೇಳಿಕೆಯನ್ನು ನಾನು ಕೇಳಿಸಿಕೊಂಡಿದ್ದೇನೆ. ಒಂದರಲ್ಲಿ ಕೇಳಿದಂಗಿದೆ. ಹೇಳಿರುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.