ಗದಗ: ಕಾನೂನು ಸಚಿವರ ತವರಲ್ಲೆ ಕಾನೂನಿಗೆ ಬೆಲೆ ಇಲ್ಲದಂತಾಗಿದೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ ಫುಡಿ ರೌಡಿಗಳ ಅಟ್ಟಹಾಸ ನಡೆದಿದೆ. ಕಿಡೆಗೇಡಿಗಳ ಗುಂಪೊಂದು 20ವರ್ಷದ ಯುವಕನ್ನು ಅಟ್ಟಾಡಿಸಿ ಹಲ್ಲೆ ಮಾಡಲಾಗಿದೆ.
ಹಲ್ಲೆಗೋಳಗಾದ ಯುವಕರ ತೇಜಸ್ ಮೇಹರವಾಡೆ(20) ಸದ್ಯ ಆಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ಮದ್ಯೆ ಹೊರಾಡುತ್ತಿದ್ದಾನೆ. ಸಹೋದರಿಗೆ ಯಾಕೆ ಚುಡಾಯಾಯಿಸುತ್ತೀರಿ ಎಂದು ಪ್ರಶ್ನೆ ಮಾಡಿದ್ದಕ್ಕೆ ಹಲ್ಲೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. 8 ಯುವಕರ ಗುಂಪಿನಿಂದ ಹಲ್ಲೆ ಮಾಡಲಾಗಿದೆ. ಸದ್ಯ ಬೆಟಗೇರಿ ಪೋಲಿಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಾಯಾಗಿದ್ದು, ಇನ್ನೂಳಿದ ಐವರ ಹುಡುಕಾಟಕ್ಕೆ ಬಲೆ ಬಿಸಿದ್ದಾರೆ. ಪುಡಿ ರೌಡಿಗಳ ಅಟ್ಟಹಾಸಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬೆಟಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.