ರಾಜಕೀಯರಾಜ್ಯ

ಶೆಟ್ಟರ್ ಗೆ ಆತ್ಮಸಾಕ್ಷಿ ಇಲ್ಲ: ಡಿಕೆಶಿ

ಜಗದೀಶ್ ಶೆಟ್ಟರ್ ಬಿಜೆಪಿಗೆ ವಾಪಸ್ಸಾಗಿದ್ದಕ್ಕೆ ಡಿಸಿಎಂ ಡಿಕೆಶಿ ಕೆಂಡಾಮಂಡಲವಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಶೆಟ್ಟರ್ ದ್ರೋಹ ಮಾಡಿದ್ದಾರೆ. ಜನ ಅವರನ್ನ ತಿರಸ್ಕರಿಸಿದ್ದರು. ಆದರೂ ನಾವು ಅವರನ್ನ ಎಂ ಎಲ್ ಸಿ ಮಾಡಿದ್ದೆವು. ಸೋತರು ಅವರನ್ನ ಗೌರವಯುತವಾಗಿ ನಡೆಸಿಕೊಂಡಿದ್ದೆವು. ಇದೀಗ ದೇಶದ ಹಿತಕ್ಕಾಗಿ ಬಿಜೆಪಿಗೆ ವಾಪಸ್ ಎಂದಿರುವ ಶೆಟ್ಟರ್ ಗೆ ಆಗ ದೇಶದ ಹಿತ ನೆನೆಪಿರಲಿಲ್ಲವಾ ಎಂದು ಕಿಡಿಕಾರಿದ್ದಾರೆ. ಅವರಿಗೆ ಆತ್ಮ ಸಾಕ್ಷಿ ಇಲ್ಲ ಅವರನ್ನು ಒತ್ತಡದಿಂದ ಕರೆದುಕೊಂಡು ಹೋಗಿದ್ದಾರಾ ಗೊತ್ತಿಲ್ಲ. ಅವರಿಗೆ ಪಕ್ಷದ ಹಿರಿಯ ನಾಯಕನ ಸ್ಥಾನ ನೀಡಿದ್ದೆವು. ಆದ್ರೆ ದ್ರೋಹ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button