Thursday, November 20, 2025
19.5 C
Bengaluru
Google search engine
LIVE
ಮನೆರಾಜಕೀಯವಿಷ್ಣು ಸ್ಮಾರಕ 'ಟ್ರಬಲ್'​​ಶೂಟರ್​​ ಭೇಟಿಗೆ 'ಕಿಚ್ಚ' ರೆಡಿ..!

ವಿಷ್ಣು ಸ್ಮಾರಕ ‘ಟ್ರಬಲ್’​​ಶೂಟರ್​​ ಭೇಟಿಗೆ ‘ಕಿಚ್ಚ’ ರೆಡಿ..!

ಬೆಂಗಳೂರು : ರಾಜಕೀಯ ವ್ಯಕ್ತಿಗಳನ್ನ ಸಿನಿಮಾರಂಗದವರು ಭೇಟಿ ಆಗೋದು ಸರ್ವೆಸಾಮಾನ್ಯವಾಗಿರುತ್ತೆ. ಅದರಂತೆ ಸ್ಯಾಂಡಲ್​​ವುಡ್​​​ ಮಾಣಿಕ್ಯ, ರನ್ನ, ಕಿಚ್ಚ ಸುದೀಪ್​​​ ಇಂದು ಮಧ್ಯಾಹ್ನ ಒಂದು ಗಂಟೆಗೆ ಡಿಸಿಎಂ ಡಿಕೆ ಶಿವಕುಮಾರ್​​ರನ್ನ ಭೇಟಿ ಮಾಡಲಿದ್ದಾರೆ.

ಭಾರೀ ಕುತೂಹಲ ಕೆರಳಿಸಿದ ಡಿಕೆಶಿ – ಕಿಚ್ಚ ಭೇಟಿ..!

ಕಳೆದ ಬಾರಿ ಡಿಕೆಶಿ ಒಡೆತನದ ಖಾಸಗಿ ಶಾಪಿಂಗ್​​ ಮಾಲ್​ ಉದ್ಘಾಟನೆಯಲ್ಲಿ ಕಿಚ್ಚ ಸುದೀಪ್​ ಭಾಗವಹಿಸಿದ್ದರು. ನಂತರದ ದಿನಗಳಲ್ಲಿ ಇವರಿಬ್ಬರ ಸ್ನೇಹ ಸಂಬಂಧ ಇನ್ನಷ್ಟು ಹೆಚ್ಚಾಗಿತ್ತು ಅನ್ನೋ ಮಾತುಗಳು ಕೇಳಿ ಬಂದಿದ್ದವು.

ವಿಷ್ಣು ಸ್ಮಾರಕ ನಿರ್ಮಾಣದ ಕುರಿತು ಚರ್ಚೆ ಸಾಧ್ಯತೆ..!

ಇಂದಿನ ಭೇಟಿ ಪ್ರಮುಖವಾಗಿ ವಿಷ್ಣು ಸ್ಮಾರಕ ಬೆಂಗಳೂರಿನಲ್ಲಿ ನಿರ್ಮಾಣವಾಗಬೇಕು ಅನ್ನೋ ಚರ್ಚೆಗಳು ನಡೆಯುವ ಸಾಧ್ಯತೆಯಿದೆ. ಸಾಹಸಸಿಂಹ ವಿಷ್ಣುವರ್ಧನ್​​ ಅಗಲಿ 14 ವರ್ಷಗಳು ಕಳೆದಿವೆ, ಸಿನಿಮಾರಂಗಕ್ಕೆ ಇವರ ಕೊಡುಗೆ ಅಪಾರವಾದದ್ದು. ಈ ಹಿಂದೆಯೂ ಕೂಡ ಹಲವು ಬಾರಿ ಈ ಹಿಂದೆ ಇದ್ದ ಸರ್ಕಾರಗಳಿಗೆ ಮನವಿ ಮಾಡಿದ್ದರು. ಆದ್ರೆ ಯಾರೂ ಕೂಡ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಮುತುವರ್ಜಿ ವಹಿಸಿರಲಿಲ್ಲ ಈ ಬಾರಿಯಾದ್ರೂ ಡಿಸಿಎಂ ಡಿಕೆಶಿ ಗ್ರೀನ್​ ಸಿಗ್ನಲ್​​ ಕೊಡ್ತಾರ ಅನ್ನೋದನ್ನ ಕಿಚ್ಚ ಭೇಟಿ ಬಳಿಕ ಗೊತ್ತಾಗಬೇಕಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments