ಚಾಮರಾಜನಗರ : ದಿ. ಆರ್ ಧ್ರುವನಾರಾಯಣ್ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಇಂದು ಸಿಎಂ ಸಿದ್ದರಾಮಯ್ಯ ಅವರು ಧ್ರುವನಾರಾಯಣ್ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.ಸಿಎಂಗೆ ಸಚಿವ ಡಾ. ಹೆಚ್ ಸಿ ಮಹದೇವಪ್ಪ, ಕೆ.ವೆಂಕಟೇಶ್ ಸಿಎಂ ಪುತ್ರ ಯತೀಂದ್ರ ಸಾಥ್ ನೀಡಿದರು.
ನಂತರ ಧ್ರುವನಾರಾಯಣ್ ಹುಟ್ಟೂರು ಹೆಗ್ಗವಾಡಿ ಗ್ರಾಮದಲ್ಲಿ ನಡೆದ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ,, ಮಾಜಿ ಸಂಸದ ದಿವಂಗತ ಆರ್.ಧೃವನಾರಾಯಣ್ ದೇಶದ ನಂಬರ್ 1 ಸಂಸದರಾಗಿದ್ದರು. ಅವರು ಅಜಾತ ಶತೃ ಎಂದರು.
ಅಭಿವೃದ್ದಿಕಾರನಾಗಿದ್ದ ಧೃವನಾರಾಯಣ್ ಅಗಲಿಕೆ ಇಡೀ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ. ಪಕ್ಷಾತೀತ ಹಾಗೂ ಜಾತ್ಯಾತೀತರಾಗಿದ್ದ ಅವರ ಅಗಲಿಕೆ ಪಕ್ಷಕ್ಕೆ ಮಾತ್ರವಲ್ಲದೆ ಸಮಾಜ ಕೂಡ ಅನಾಥವಾಗಿದೆ. ಧೃವನಾರಾಯಣ್ ಅವರ ಸ್ಥಾನ ತುಂಬಲು ಅವರ ಮಗ ಶಾಸಕ ದರ್ಶನ್ ಧೃವನಾರಾಯಣ್ ಸಿದ್ದರಾಗಿದ್ದಾರೆ. ದರ್ಶನ್ ಧೃವನಾರಾಯಣ್ ಪರವಾಗಿ ನಾನು ಇರ್ತೇನೆ ಎಂದು ಭರವಸೆ ನೀಡಿದರು..