Wednesday, April 30, 2025
24 C
Bengaluru
LIVE
ಮನೆರಾಜ್ಯಛತ್ರಪತಿ ಶಿವಾಜಿ ಜಾತಿವಾದಿಯಾಗಿರಲಿಲ್ಲ: ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ

ಛತ್ರಪತಿ ಶಿವಾಜಿ ಜಾತಿವಾದಿಯಾಗಿರಲಿಲ್ಲ: ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ

ಧಾರವಾಡ: ಶಿವಾಜಿ ಮಹಾರಾಜರು ಜಾತಿವಾದಿಯಾಗಿರಲಿಲ್ಲ. ಅವರು ಅನ್ಯಾಯದ ವಿರುದ್ದ ಹೋರಾಟ ಮಾಡುತ್ತಿದ್ದರು. ಅವರಿಗೆ ತಾಯಿ ಜೀಜಾಬಾಯಿ ಆದರ್ಶ ಆಗಿದ್ದರು. ಇಂದಿನ ಮಕ್ಕಳಿಗೆ ಶಿವಾಜಿಯ ಆದರ್ಶ ಅಗತ್ಯ ಇದೆ ಎಂದು ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಮಠದ ಭವಾನಿ ದತ್ತಪೀಠದ ಪರಮಪೂಜ್ಯ ಜಗದ್ಗುರು ವೇದಾಂತಾಚಾರ್ಯ, ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಹೇಳಿದ್ದಾರೆ.


ಅವರು ಧಾರವಾಡ ತಾಲೂಕಿನ ದೇವಗಿರಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಕಾರ್ಯಕ್ರಮದ ಧಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ಶಿವಾಜಿ ಮಹಾರಾಜರು 397 ವರ್ಷಗಳ ಹಿಂದೆ ಭಾರತದಲ್ಲಿ ಅವತಾರ ಎತ್ತಿದರು. ಆಗಿನ ಕಾಲದಲ್ಲಿ ಬಹಳ ಪ್ರತಿಕೂಲ ಪರಿಸ್ಥಿತಿಯಲ್ಲಿ ಮಹಾರಾಜರು ಅವತಾರವೆತ್ತಿದರು. ಈಗಿನ ಶಾಲಾ ಮಕ್ಕಳಿಗೆ ತಮ್ಮ ಮುತ್ತಾತನ ಹೆಸರು ಗೊತ್ತಿಲ್ಲ ಆದರೆ, ಶಿವಾಜಿ ಮಹಾರಾಜರ ಹೆಸರು ಗೊತ್ತು. ಯಾಕೆಂದರೆ ಅವರು ಕೇವಲ ತಮಗಾಗಿ ಅಷ್ಟೇ ಬದುಕಲಿಲ್ಲ. ಸಮಾಜಕ್ಕಾಗಿ, ಬಡವರಿಗಾಗಿ, ಧರ್ಮಕ್ಕಾಗಿ ಬದುಕಿದ್ದರು. ಹೀಗಾಗಿ ಶಿವಾಜಿ ಮಹಾರಾಜರ ಹೆಸರು ಸೂರ್ಯಚಂದ್ರ ಇರುವವರೆಗೂ ಇದ್ದೇ ಇರುತ್ತದೆ. ಸ್ವಾಮಿ ವಿವೇಕಾನರಂದರು, ಬಸವಾದಿ ಶರಣರು, ಆದಿ ಶಂಕರಾಚಾರ್ಯರು ಅದೇ ರೀತಿ ಬದುಕಿದ್ದರು. ಹೀಗಾಗಿ ಅವರ ಹೆಸರು ಈಗಲೂ ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.


ದುಡ್ಡು ಸಂಪಾದನೆ ಮಾಡಬೇಕು ಎನ್ನುವುದು ಕೆಲವರ ಬಯಕೆ ಆಗಿರುತ್ತದೆ. ಆದರೆ, ಕೇವಲ ಅದೊಂದೆ ಜೀವನ ಅಲ್ಲ. ದುಡ್ಡು ಬೇಕು. ಅದು ಅನ್ಯಾಯದಿಂದ ಬರಬಾರದು. ಛತ್ರಪತಿ ಶಿವಾಜಿಯವರು ಅಧಿಕಾರ ತೆಗೆದುಕೊಂಡಾಗ ಕೇವಲ ನಲವತ್ತು ಕೋಟೆಗಳು ಇದ್ದವು, ಅವರು ಸುಮಾರು 800 ಕೋಟೆಗಳನ್ನು ಗೆದ್ದುಕೊಂಡಿದ್ದರು. ಆದರೆ, ಕೋಟೆಯನ್ನು ಯಾವುದೇ ಅನ್ಯಾಯದಿಂದ ಗೆದ್ದುಕೊಳ್ಳಲಿಲ್ಲ ಎಂದರು.


ದಾನಕ್ಕೆ ಕರ್ಣನ ಹೆಸರು ಹೇಗೆ ಹೇಳುತ್ತೇವೆಯೋ ಅದೇ ರೀತಿ ಶಿವಾಜಿ ಮಹಾರಾಜರದು ಇನ್ನೊಂದು ಹೆಸರು. ಶಿವಾಜಿ ಮಹಾರಾಜರು ತಮ್ಮ ಗುರುಗಳಿಗೆ ಎಷ್ಟು ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು ಅಂದರೆ, ತಮ್ಮದೇನೇ ಇದ್ದರು ಅದು ಎಲ್ಲವೂ ಗುರುಗಳದ್ದು ಎಂದು ಹೇಳಿದ್ದರು. ನಾವು ಹೋದ ನಂತರವೂ ನಮ್ಮ ಕೆಲಸ ಶಾಸ್ವತವಾಗಿ ಇರಬೇಕು ಎಂದರೆ, ಅದರ ಹಿಂದೆ ಆದ್ಯಾತ್ಮ ಶಕ್ತಿ ಇರಬೇಕು. ಶಿವಾಜಿಗೆ ತಂದೆ ತಾಯಿ, ಗುರುಗಳ ಮೇಲೆ ಭಕ್ತಿ ಇತ್ತು. ಮಹಿಳೆಯರ ಮೇಲೆ ಮಾತೃ ದೃಷ್ಟಿ ಇರುವ ಮಹಾರಾಜ ಅವರೊಬ್ಬರೇ, ಶಿವಾಜಿ ಆಚಾರಶೀಲ ರಾಜರಾಗಿದ್ದರು, ಮಕ್ಕಳಿಗೆ ಶಿವಾಜಿಯ ಆದರ್ಶ ಈಗ ಅಗತ್ಯ ಇದೆ. ಶಿವಾಜಿಗೆ ತಾಯಿಯ ಮಾತು ಆದರ್ಶವಾಗಿತ್ತು. ತಾಯಂದಿರುವ ನಿಮ್ಮ ಮಕ್ಕಳಿಗೆ ಅವರ ಆದರ್ಶವನ್ನು ಕಲಿಸಬೇಕು ಎಂದು ಕಿವಿ ಮಾತು ಹೇಳಿದರು.

ಶಿವಾಜಿ ಮಹಾರಾಜರು ಯಾವುದೇ ಜಾತಿ ಹಾಗೂ ಧರ್ಮದ ವಿರುದ್ದ ಇರಲಿಲ್ಲ. ಅಫ್ಜಲ್ ಖಾನ್ ಮೋಸ ಮಾಡುತ್ತಾನೆ ಎಂದು ಶಿವಾಜಿ ಮಹಾರಾಜರಿಗೆ ಜಾಗೃತಿ ಮೂಡಿಸಿದವರು ಒಬ್ಬ ಮುಸ್ಲೀಮ್ ವ್ಯಕ್ತಿ. ಅವನು ಅನ್ಯ ಧರ್ಮಿಯರ ವಿರೋಧಿಯಾಗಿರಲಿಲ್ಲ. ದುಷ್ಕರ್ಮಿಗಳ ವಿರೋಧಿಯಾಗಿದ್ದರು. ಅಸ್ಪೃಶ್ಯರ ವಿರೋಧಿಯಾಗಿರಲಿಲ್ಲ ಎಲ್ಲ ಧರ್ಮಿಯರ, ಎಲ್ಲ ಸಮಾಜದವರ ಪರವಾಗಿ ಇದ್ದರು ಎಂದು ಹೇಳಿದರು.

ಮರಾಠರು ಸಂಘಟಿತರಾಗಬೇಕು. ಮರಾಠ ಸಮುದಾಯ ರಾಜಕೀಯವಾಗಿ ಬೆಳೆದಿಲ್ಲ. ಅದಕ್ಕೆ ಸಂಘಟನೆಯ ಕೊರತೆ ಕಾರಣದಿಂದ ಸಮಾಜಕ್ಕೆ ರಾಜಕೀಯ ನ್ಯಾಯ ಸಿಗುತ್ತಿಲ್ಲ. ಹೀಗಾಗಿ ಸಮಾಜ ಸಂಘಟಿತರಾಗಬೇಕು. ಸಮಾಜದ ಒಳಿತಿಗಾಗಿ ಹಳಿಯಾಳದಲ್ಲಿ ಗುರುಕುಲ ಆರಂಭ ಮಾಡುತ್ತಿದ್ದೇವೆ. ಅಲ್ಲಿ ಎಲ್ಲ ವರ್ಗದ ಮಕ್ಕಳಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.ಒಳ್ಳೆಯ ಜನ ಪರ್ವತ ರೀತಿ ಒಳ್ಳೆಯ ವಿಚಾರ ಇರುವ ಊರು ದೇವಗಿರಿ. ದೇವರು ಇರುವ ಊರು ದೇವಗಿರಿ, ಇಲ್ಲಿ ಎಲ್ಲ ಜನರು ಒಳ್ಳೆಯ ಸದ್ಭಾವನೆ, ಸಹಬಾಳ್ವೆಯ ಗುಣದವರಿದ್ದಾರೆ. ಹೀಗಾಗಿ ಈ ಊರಲ್ಲಿ ಒಳ್ಳೆಯದೇ ಆಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಪ್ರಾಂತ ಪ್ರಚಾರಕ ಶ್ರೀಧರ ನಾಡಿಗೇರ, ಪ್ರೊ. ಸತೀಶ್ ಜಾಧವ, ಕಾಂಗ್ರೆಸ್ ಮುಖಂಡರಾದ ಶ್ರೀಕಾಂತ ಗಾಯಕ್ವಾಡ್, ಸುರೇಶ್ ಕರಿಗೌಡರ, ಕಲಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಭೀಮವ್ವ ಮರೇವಾಡ, ಹಿರಿಯರಾದ ತಾನಾಜಿ ದುರ್ಗಾಯಿ, ಪಂಚಾಯತಿ ಸದಸ್ಯರಾದ ಮಾರುತಿ ಬಾಂಗಡಿ ಸೇರಿದಂತೆ ಊರಿನ ಮುಖಂಡರು ಹಾಜರಿದ್ದರು.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments