ಧಾರವಾಡ : ಧಾರವಾಡ ಕಾರಾಗೃಹದಲ್ಲಿ ಪದೇ ಪದೇ ಗಲಾಟೆ ಹಿನ್ನೆಲೆ ದೂರುಗಳು ಕೇಳಿ ಬಂದ ಕಾರಣ ಕಾರಗೃಹ ಪರಿಶೀಲನೆಗೆಂದು ಹುಬ್ಬಳ್ಳಿ ಧಾರವಾಡ, ಆಯುಕ್ತೆ ರೇಣುಕಾ ಸುಕುಮಾರ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯ್ತು.. ಪರಿಶೀಲನೆ ಬಳಿಕ ಕಾರಗೃಹದ ಸಿಬ್ಬಂದಿ ಜೊತೆ ಸಭೆ ನಡೆಸಿದ್ರು.
ಕೈದಿ ಮತ್ತು ಸಿಬ್ಬಂದಿ ಮಧ್ಯೆ ಆಗಾಗ ನಡೆಯುತ್ತಿರೋ ಸಂಘರ್ಷದ ಕುರಿತು ಚರ್ಚೆ ನಡೆಸಲಾಗಿದೆ. ಇತ್ತೀಚೆಗೆ ಕೈದಿಗಳ ಮಧ್ಯೆ ನಡೆದಿದ್ದ ಹೊಡೆದಾಟದ ಹಿನ್ನೆಲೆ ಭದ್ರತೆ ಹೆಚ್ಚಿಸುವ ಕುರಿತು ಚರ್ಚೆ ಮಾಡಲಾಗಿದೆ. ಇನ್ನು ಜೈಲಿಗೆ ಅಗತ್ಯ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ, ಹಾಗೂ ಇನ್ನಿತರೆ ಸೌಲಭ್ಯಗಳನ್ನ ಹೆಚ್ಚಿಸುವ ವಿಚಾರವಾಗಿಯೂ ಸಲಹೆಗಳನ್ನ ಆಯುಕ್ತೆ ನೀಡಿದ್ದಾರೆ.