
ದೇವನಹಳ್ಳಿ: ಇನ್ನೂ ಕಂಗಟಾಗೇ ಉಳಿದಿರುವ ಚಿಕ್ಕಬಳ್ಳಾಪುರ ಲೋಕಸಭಾ ಟಿಕೆಟ್ ವಿಚಾರವಾಗಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ರಕ್ಷಾ ರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕದಲ್ಲಿ ನಾಲ್ಕು ಕ್ಷೇತ್ರಗಳು ಮಾತ್ರ ಅಘೋಷಿತವಾಗಿದ್ದವು, ಅದರಲ್ಲಿ ಕೋಲಾರ ಮಾತ್ರ ಹಗ್ಗಜಗ್ಗಾಟ ಇತ್ತು, ಅದೂ ಈಗ ಫೈನಲ್ ಆಗಿದೆ. ಬಹುಶಃ ಇನ್ನುಳಿದ ಕ್ಷೇತ್ರಗಳ ಟಿಕೆಟ್ ಘೋಷಣೆ ಇಂದು ಅಥವಾ ನಾಳೆ ಫೈನಲ್ ಆಗಬಹುದು. ಸರ್ವೇಗಳ ಪ್ರಕಾರ ಮಾಜಿ ಸಂಸದ ವೀರಪ್ಪ ಮೋಯ್ಲಿ ಹೆಸರು ಮುಂಚೂಲಿಯಲ್ಲಿತ್ತು. ಜೊತೆಯಲ್ಲಿ ಶಿವಶಂಕರ್ ರೆಡ್ಡಿ ಹೆಸರು ಚರ್ಚೆಯಲ್ಲಿದೆ. ಇಲ್ಲಿ ಯಾರಿಗೇ ಟಿಕೆಟ್ ನೀಡಿದರೂ ಪಕ್ಷದ ಪರವಾಗಿ ಎಲ್ಲಾರೂ ಕೆಲಸ ಮಾಡುತ್ತೇವೆ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರು ಬದ್ದರಾಗಿರುತ್ತೇವೆ ಎಂದು ತಿಳಿಸಿದರು.




