ದಾವಣಗೆರೆ: ಹರಿಹರದ ಐತಿಹಾಸಿಕ ಶ್ರೀ ಹರಿಹರೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಇಂದು ನರೆವೇರಿದ್ದು, ಸ್ವಾಮಿಯ ಬ್ರಹ್ಮ ರಥೋತ್ಸವವನ್ನು ಸಾವಿರಾರು ಭಕ್ತರು ದೇವರ ಕೃಪೆಗೆ ಪಾತ್ರರಾದರು. ಸುಡು ಬಿಸಿಲನ್ನೂ ಲೆಕ್ಕಿಸಿದೆ ರಥೋತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಭಕ್ತರಿಗೆ ಪಾನಕ, ಮಜ್ಜಿಗೆ ಅನ್ನಸಂತರ್ಪಣೆ ಹಲವು ಸಂಘಟನೆಗಳಿಂದ ಏರ್ಪಡಿಸಲಾಗಿತ್ತು.
ರಥೋತ್ಸವ ನಿಮಿತ್ತ ಶ್ರೀ ನಾರಾಯಣ ಜೋಯಿಸ್ ಅವರ ನೇತೃತ್ವದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದಿದ್ದು, ಫೆಬ್ರವರಿ ಭಾನುವಾರ ರಂದು ಬೆಳಗಿನ ಪೂಜೆ ವರೆಗೆ ವಿವಿಧ ಕಾರ್ಯಗಳ ನಡೆಯಲಿವೆ. ಇನ್ನು ಸಂಜೆ ಶ್ರೀ ಪದ್ಮಭಾಸ್ಕರ ನೃತ್ಯ ಕಲಾ ಕೇಂದ್ರ (ಧಾರವಾಡ) ಇವರಿಂದ ಭರತ ನಾಟ್ಯ, ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಒಟ್ಟಾರೆ ಹರಿ ಮತ್ತು ಹರ ಈ ವಿಶೇಷ ದೇವರ ಸನ್ನಿಧಿಯಲ್ಲಿ ಬಿಸಿಲು ಲೆಕ್ಕಿಸದೆ ಭಕ್ತರು ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡಿದ್ದಂತೂ ವಿಶೇಷ ಅಂದ್ರೆ ತಪ್ಪಾಗಲಿಕ್ಕಿಲ್ಲ.