ಕ್ರೈಂ ಸ್ಟೋರಿಸುದ್ದಿ

ಸಿನಿಮಾ ಸ್ಟೈಲ್​ನಲ್ಲಿ ಕೊಲೆಗೆ ಯತ್ನ!

ಅಂಕೋಲಾ : ಕುತ್ತಿಗೆಗೆ ಚಾಕು ಹಾಕಿ ಕೊಲೆಗೆ ಯತ್ನಿಸುತ್ತಿದ್ದ ವ್ಯಕ್ತಿಯಿಂದ ಸಿನಿಮಾದಲ್ಲಿ ನಡೆಯುವ ರೀತಿಯಲ್ಲಿ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿರುವಂತಹ ಘಟನೆ ತಾಲೂಕಿನ ಮಂಜಗುಣಿಯ ತಾರಿಯ ಬಳಿ ಭಾನುವಾರ ರಾತ್ರಿ ನಡೆದಿದೆ.

ಬೆಳಂಬಾರದ ಮುಡ್ರಾಣಿಯ ಗಂಗಾಧರ ಸುಕ್ರು ಗೌಡ ಎಂಬ ವ್ಯಕ್ತಿ ಚಾಕು ಒಳಗಾಗಿರುವಂತಹ ವ್ಯಕ್ತಿಯಾಗಿದ್ದಾರೆ. ಬೆಳಂಬಾರ ತಾಳೇಬೈಲನ ಗಂಗಾಧರ ಗೌಡ ತನ್ನ ಮನೆಗೆ ಹೋಗಲು ಕುಂಬಾರಕೇರಿಯ ಬಳಿ ನಿಂತಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ವ್ಯಕ್ತಿಯೊಬ್ಬ, ಗಂಗಾಧರ ಗೌಡನನ್ನು ಬೆಳಂಬಾರಕ್ಕೆ ಬಿಡುತ್ತೇನೆ ಎಂದು ತನ್ನ ಬೈಕನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕುತ್ತಿಗೆಯನ್ನು ಹಿಡಿದುಕೊಂಡು ನಿರ್ದಾಕ್ಷಿಣ್ಯವಾಗಿ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಎದ್ದೋ ಬಿದ್ದು ಆತನಿಂದ ತಪ್ಪಿಸಿ ಕೊಂಡು ಬಂದ ಗಂಗಾಧರ ಗೌಡ, ರಸ್ತೆಯ ಬದಿಯ ಚರಂಡಿಯೊಳಗೆ ಅವಿತುಕೊಂಡು ರಾತ್ರಿ ಕಳೆದಿದ್ದಾನೆ. ಬೆಳಿಗ್ಗೆ ಅಂಕೋಲಾ ಸರಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾನೆ. ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ

Comments (0)

Your email address will not be published. Required fields are marked *

Back to top button