ಲೋಕಸಭೆಯ ರಣಕಣದಲ್ಲಿ ಐವರು ಮಹಿಳೆಯರು ಟಿಕೆಟ್ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶತಾಯ ಗತಾಯ ಹೆಚ್ಚು ಸ್ಥಾನ ಗಳಿಸಲು ಯತ್ನಿಸುತ್ತಿರುವ ಕಾಂಗ್ರೆಸ್ 6 ಜನ ಮಹಿಳೆಯರಿಗೆ ಮಣೆ ಹಾಕಿದೆ . 6ಜನ ಮಹಿಳೆಯರಿಗೆ ಟಿಕೆಟ್ ನೀಡಿ ಮಹಿಳಾ ಮತದಾರರ ಮತ ಸೆಳೆಯುವ ತಂತ್ರ ಹೆಣೆದಿದೆ.
ಬೆಂಗಳೂರು ದಕ್ಷಿಣದಲ್ಲಿ ಸೌಮ್ಯ ರೆಡ್ಡಿ, ದಾವಣಗೆರೆ ಕ್ಷೇತ್ರದಿಂದ ಡಾ ಪ್ರಭಾ ಮಲ್ಲಿಕಾರ್ಜುನ, ಶಿವಮೊಗ್ಗದಿಂದ ಗೀತಾ ಶಿವರಾಜಕುಮಾರ, ಉತ್ತರ ಕನ್ನಡ ಕ್ಷೇತ್ರದಿಂದ ಡಾ. ಅಂಜಲಿ ನಿಂಬಾಳ್ಕರ್, ಚಿಕ್ಕೋಡಿಯಿಂದ ಪ್ರೀಯಾಂಕ ಜಾರಕಿಹೊಳಿ, ಬಾಗಲಕೋಟಿಯಿಂದ ಸಂಯುಕ್ತ ಪಾಟೀಲ್ಗೆ ಟಿಕೆ್ಟ್ ನೀಡಲಾಗಿದೆ. ಆದರೆ, ಮತದಾರರು ಕಾಂಗ್ರೆಸ್ನ ಈ ತಂತ್ರಗಾರಿಕೆಗೆ ಯಾವ ರೀತಿ ಬೆಂಬಲಿಸುತ್ತಾರೆ ಎನ್ನೋದನ್ನ ಕಾಯ್ದು ನೋಡಬೇಕಿದೆ.