ದಳಪತಿ ವಿಜಯ್ ಟೀಂ ನಿನ್ನೆ ಕೇರಳದ ತಿರುವನಂತಪುರಂಗೆ ಭೇಟಿ ನೀಡಿದ್ದು, ಈ ವೇಳೆ ಅಭಿಮಾನಿಗಳು ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ವೇಳೆ ನೂಕು ನುಗ್ಗಲು ಆಗಿದೆ. ವಿಮಾನ ನಿಲ್ದಾಣದಿಂದ ಅವರು ತಂಗುವ ಹೋಟೆಲ್ ವರೆಗೂ ಫಾಲೋ ಮಾಡಿಕೊಂಡು ಹೋಗಿರುವ ವಿಡಿಯೋ ವೈರಲ್ ಆಗಿದೆ.

ಇನ್ನೂ ಇದೇ ವೇಳೆ ಅಭಿಮಾನಿಗಳಿಂದ ವಿಜಯ್ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಪರಿಣಾಮ ಕಾರಿನ ಗಾಜು ಜಖಂಗೊಂಡಿದೆ. ಬರೋಬ್ಬರಿ 14 ವರ್ಷಗಳ ಬಳಿಕ ವಿಜಯ್ ಕೇರಳಕ್ಕೆ ಹೋಗಿದ್ದರು ಎನ್ನಲಾಗಿದೆ. ಅದೇ ಕಾರಣಕ್ಕೆ ಅವರನ್ನು ಆತ್ಮೀಯವಾಗಿ ಸ್ವಾಗತಿಸುವ ಬರದಲ್ಲಿ ಅಭಿಮಾನಿಗಳು ಅನಾಹುತ ಮಾಡಿದ್ದಾರೆ.

ಪರಿಣಾಮ ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಲಾಠಿಚಾರ್ಜ್ ಕೂಡ ಮಾಡಿದ್ದಾರೆ.
ವರದಿಗಳ ಪ್ರಕಾರ ವಿಜಯ್ ತಮ್ಮ ಮುಂದಿನ ಸಿನಿಮಾ ಗ್ರೇಟೆಸ್ಟ್ ಆಫ್ ಆಲ್ ಟೈಮ್ (ಗೋಟ್) ಸಿನಿಮಾದ ಶೂಟಿಂಗ್ಗಾಗಿ ತೆರಳಿದ್ದರು. ಸದ್ಯ ಅಭಿಮಾನಿಗಳ ದಾಂಧಲೆಯಿಂದಾಗಿ ಚಿತ್ರೀಕರಣವನ್ನು ಸ್ಥಗಿತಗೊಳಿಸಿದ್ದಾರೆ. ಗೋಟ್ ಚಿತ್ರತಂಡವು ಒಂದು ವಾರಗಳ ಕಾಲ ಕೇರಳದಲ್ಲಿ ಶೂಟಿಂಗ್ ಮಾಡಲು ನಿರ್ಧರಿಸಿತ್ತು. ವೆಂಕಟ್ ಪ್ರಭು ನಿರ್ದೇಶನದ ಈ ಚಿತ್ರವು ಮುಂದಿನ ವರ್ಷ ತೆರೆಗೆ ಬರಲು ಸಿದ್ಧತೆ ನಡೆಸಿದೆ.

By admin

Leave a Reply

Your email address will not be published. Required fields are marked *

Verified by MonsterInsights