ನಟಿ ಪೂನಂ ಪಾಂಡೆ ಅವರು ಸತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಸ್ವತಃ ಪೂನಂ ಪಾಂಡೆ ಖಾತೆ ಮೂಲಕ ಸಾವಿನ ವಿಚಾರ ತಿಳಿಸಲಾಗಿತ್ತು. ಆದ್ರೆ ಪೂನಂ ಪಾಂಡೆ ಬದುಕಿದ್ದಾರೆ. ತಾವು ಸುಳ್ಳು ಹೇಳಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ. ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಈ ರೀತಿ ಮಾಡಿದ ಎಂದು ಅವರು ಹೇಳಿದ್ದಾರೆ.
ಪೂನಂ ಪಾಂಡೆ ಮೃತಪಟ್ಟಿದ್ದಾರೆ ಎಂದು ಇನ್ಸ್ಟಾಗ್ರಮ್ ಖಾತೆಯಲ್ಲಿ ಪೋಸ್ಟ್ ಮಾಡಲಾಯಿತು. ಅವರ ಮ್ಯಾನೇಜರ್ ಪಾರುಲ್ ಚಾವ್ಲಾ ಕೂಡ ಈ ವಿಚಾರ ಖಚಿತಪಡಿಸಿದ್ದರು. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ಅವರ ಸಾವಿಗೆ ಸಂತಾಪ ಸೂಚಿಸಿದರು. ಆದರೆ ಇಂದು ಪೂನಂ ಪಾಂಡೆ ತಾವು ಬದುಕಿರುವುದಾಗಿ ಹೊಸ ವಿಡಿಯೋ ಹಂಚಿಕೊಂಡಿದ್ದಾರೆ.