ಮೃಣಾಲ್ ಠಾಕೂರ್ ವಿಜಯ್ ದೇವರಕೊಂಡ ಜತೆಗೆ ನಟಿಸಿದ ‘ಫ್ಯಾಮಿಲಿ ಸ್ಟಾರ್’ ಸಿನಿಮಾ ರಿಲೀಸ್’ಗೆ ಸಿದ್ಧವಾಗಿದೆ. ಇದರ ಬೆನ್ನಲ್ಲೇ ಬಾಲಿವುಡ್’ನ ಬಿಗ್ ಪ್ರಾಜೆಕ್ಟ್‌ವೊಂದರಲ್ಲಿ ನಟಿಸಲು ನಟಿ ರೆಡಿಯಾಗಿದ್ದಾರೆ. ಡೇವಿಡ್ ಧವನ್ ಮತ್ತು ವರುಣ್ ಧವನ್ ನಟನೆಯ ಪ್ರಾಜೆಕ್ಟ್’ನಲ್ಲಿ ಮೃಣಾಲ್ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ.
ವರುಣ್-ಮೃಣಾಲ್ ಮೊದಲ ಬಾರಿಗೆ ಸಿನಿಮಾಗೆ ಜೊತೆಯಾಗಿ ನಟಿಸುತ್ತಿದ್ದಾರೆ. ಇದೊಂದು ಕಾಮಿಡಿ ಕಮ್ ರೊಮ್ಯಾಂಟಿಕ್ ಚಿತ್ರವಾಗಿದೆ. ಮೇ ಅಥವಾ ಜೂನ್’ನಿಂದ ಚಿತ್ರೀಕರಣ ಪ್ರಾರಂಭ. ಇಬ್ಬರ ಜೋಡಿ ತೆರೆಯ ಮೇಲೆ ನೋಡೋಕೆ ಫ್ಯಾನ್ಸ್ ಕಾಯುತ್ತಿದ್ದಾರೆ.
ಈ ಚಿತ್ರದ ಜೊತೆಗೆ ‘ಪೂಜಾ ಮೇರಿ ಜಾನ್’ ಎಂಬ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ನಟಿಸಿದ್ದಾರೆ. ತೆಲುಗಿನಲ್ಲಿಯೂ ಸ್ಟಾರ್ ನಟರ ಜೊತೆ ತೆರೆಹಂಚಿಕೊಳ್ತಿದ್ದಾರೆ.


