ಸಿನಿಮಾಸುದ್ದಿ

ತಾಯಿ ಆಗ್ತಿದ್ದಾರೆ ಮಿಲನಾ ನಾಗರಾಜ್; ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ‘ಡಾರ್ಲಿಂಗ್’ ಜೋಡಿ

ಸ್ಯಾಂಡಲ್​ವುಡ್ ಸ್ಟಾರ್​ ಜೋಡಿ ಮಿಲನಾ ನಾಗರಾಜ್ ಮತ್ತು ಡಾರ್ಲಿಂಗ್ ಕೃಷ್ಣ ಕುಟುಂಬದಲ್ಲಿ ಇಂದು ಡಬಲ್ ಸಂಭ್ರಮ. ಒಂದು ಶಿವರಾತ್ರಿ ಹಬ್ಬದ ಸಡಗರವಾದರೆ, ಇನ್ನೊಂದು ಈ ಜೋಡಿಯ ಚೊಚ್ಚಲ ಮಗುವಿನ ಆಗಮನದ ಕಾಯುವಿಕೆಯಲ್ಲಿದೆ.

ಈ ಬಗ್ಗೆ ಮಿಲನಾ ನಾಗರಾಜ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಶುಭ ಶಿವರಾತ್ರಿಯಂದು ಇನ್​ಸ್ಟಾದಲ್ಲಿ ಪೋಸ್ಟ್ ಮಾಡಿರುವ ಮಿಲನಾ, ಸಾಂಕೇತಿಕವಾಗಿ ಮಗುವಿನ ಬಟ್ಟೆಯ ಫೋಟೋ ಶೇರ್ ಮಾಡಿದ್ದಾರೆ. KrissMi’ ಎಂದು ಬಟ್ಟೆಯ ಮೇಲೆ ಬರೆದಿರೋ ಹಿನ್ನೆಲೆಯಲ್ಲಿ ಮಗುವಿಗೆ ಅದೇ ಹೆಸರು ಇಡುತ್ತಾರೆ ಎಂದು ಅಭಿಮಾನಿಗಳು ಮಾತಾಡಿಕೊಳ್ತಿದ್ದಾರೆ.

Comments (0)

Your email address will not be published. Required fields are marked *

Back to top button