ರಾಜ್ಯಸಿನಿಮಾಸುದ್ದಿ

ಸಂಗೀತದಲ್ಲಿ ಸಕ್ಸಸ್ ಆಗಿದ್ದ ಅರ್ಜುನ್ ಜನ್ಯ ಚಿತ್ರ ನಿರ್ದೇಶಕರಾಗಿ ಸಕ್ಸಸ್ ಕಾಣ್ತಾರಾ ?

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನದ ಮೊದಲ ಚಿತ್ರ ಹಾಗು ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರು ಅಭಿನಯಿಸುತ್ತಿರುವ ಮಲ್ಟಿಸ್ಟಾರರ್ ಸಿನಿಮಾ “45”.

 

ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ “45” ಚಿತ್ರಕ್ಕೆ ಬೆಂಗಳೂರಿನಲ್ಲಿ ಚಿತ್ರೀಕರಣ ಬರದಿಂದ ಸಾಗುತ್ತದೆ, ಬನ್ನೇರುಘಟ್ಟದ ಶ್ರೀಚಂಪಕಧಾಮ ಸ್ವಾಮಿ ದೇವಸ್ಥಾನದ ಬಳಿ ಚಿತ್ರದ ಅದ್ದೂರಿ ಸನ್ನಿವೇಶವೊಂದರ ಚಿತ್ರೀಕರಣ ನಡೆಯಿತು ಸುಮಾರು ಒಂದು ಸಾವಿರಕ್ಕೂ ಅಧಿಕ ಜನರು ಈ ಸನ್ನಿವೇಶದಲ್ಲಿ ಪಾಲ್ಗೊಂಡಿದ್ದರು.

ಮೋಕೋಬೋಲ್ಟ್, ರೋಪ್ ಕ್ಯಾಮೆರಾ ಸೇರಿದಂತೆ ಇನ್ನೂ ಹಲವು ದುಬಾರಿ ಸಲಕರಣೆಗಳ ಬಳಸಿ ಈ ದೃಶ್ಯವನ್ನು ಚಿತ್ರಿಸಲಾಗಿದೆ . ಒಂದು ಸನ್ನಿವೇಶಕ್ಕಾಗಿ 418 ಕ್ಕೂ ಹೆಚ್ಚು ಕಲರ್ ಬಾಂಬ್ ಗಳನ್ನು ಬಳಸಿರುವುದು ಕನ್ನಡದಲ್ಲಿ ಇದೇ ಮೊದಲು. ಈ ಅದ್ದೂರಿ ಸನ್ನಿವೇಶಕ್ಕೆ ಭಾರತ ಚಿತ್ರರಂಗದ ಜನಪ್ರಿಯ ನೃತ್ಯ ನಿರ್ದೇಶಕ ಚಿನ್ನಿಪ್ರಕಾಶ್ ಅವರು ಕೊರಿಯೋಗ್ರಫಿ ಮಾಡಿರುವುದು ವಿಶೇಷವಾದರೆ . ಸತ್ಯ ಹೆಗಡೆ ಅವರ ಛಾಯಾಗ್ರಹಣ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ .

ಸೂರಜ್ ಪ್ರೊಡಕ್ಷನ್ಸ್ ಮೂಲಕ “ಗಾಳಿಪಟ 2” ಸೇರಿದಂತೆ ಇನ್ನೂ ಅನೇಕ ಸದಭಿರುಚಿಯ ಚಿತ್ರಗಳನ್ನು ನೀಡಿರುವ ರಮೇಶ್ ರೆಡ್ಡಿ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ.‌ ಅರ್ಜುನ್ ಜನ್ಯ ಸಂಗೀತದಲ್ಲಿ ಜನರ ಮನ ಗೆದ್ದಿರುವ ಹಾಗೇ ನಿರ್ದೇಶಕನಾಗಿಯೂ ಜನಪ್ರಿಯತೆ ಪಡೆಯುತ್ತಾರ ಎನ್ನುವುದು ಕಾದು ನೋಡಬೇಕಾಗಿದೆ.

ಪ್ರೀತ್ಸೆ ಚಿತ್ರದ ನಂತರ ತೆರೆ ಹಂಚಿಕೊಂಡಿರುವ ಶಿವರಾಜಕುಮಾರ್, ಹಾಗೂ ಉಪೇಂದ್ರ , ಹಾಗೇ ಅವರ ಜೊತೆ ಯಲ್ಲಿ ರಾಜ್ ಬಿ ಶೆಟ್ಟಿ ಅವರಂತಹ ಅದ್ಭುತ ಕಲಾವಿದರನ್ನು ಒಂದೇ ಚಿತ್ರದಲ್ಲಿ ನೋಡುವುದು , ಕನ್ನಡ ಚಿತ್ರ ರಸಿಕರಿಗೆ ವಿಶೇಷವೆ ಸರಿ.

Comments (0)

Your email address will not be published. Required fields are marked *

Back to top button