“ಡೆವಿಲ್” ಚಿತ್ರದ ಬಗ್ಗೆ ನಾವೇ ಸದ್ಯದಲ್ಲೇ ಅಧಿಕೃತ ಮಾಹಿತಿ ನೀಡುತ್ತೇವೆ. ಅಲ್ಲಿಯವರೆಗೂ ಯಾವುದೇ ಗಾಳಿ ಸುದ್ದಿ ನಂಬಬೇಡಿ ನಿರ್ದೇಶಕ ಪ್ರಕಾಶ್ ವೀರ್ ಹೇಳಿದರು.
“ಮಿಲನ” ಚಿತ್ರದ ಖ್ಯಾತಿಯ ಪ್ರಕಾಶ್ ವೀರ್ ಅವರ ನಿರ್ದೇಶನದಲ್ಲಿ ,ದರ್ಶನ್ ತೂಗುದೀಪ್ ಅವರು ನಾಯಕರಾಗಿ ನಟಿಸುತ್ತಿರುವ “ಡೆವಿಲ್” ಚಿತ್ರದ ಸ್ಕ್ರಿಪ್ಟ್ ಪೂಜೆ ಎರಡು ತಿಂಗಳ ಹಿಂದೆ ನೆರವೇರಿತ್ತು. ಆದರೆ ಚಿತ್ರತಂಡ “ಡೆವಿಲ್” ಚಿತ್ರದ ಕುರಿತಂತೆ ಇನ್ನು ಯಾವುದೇ ಪ್ರಚಾರ ಕಾರ್ಯ ಆರಂಭ ಮಾಡಿಲ್ಲ.
ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೋ ಚಿತ್ರ ಬಳಸಿ “ಡೆವಿಲ್” ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅಂತ ಸೋಶಿಯಲ್ ಮಿಡಿಯಾದಲ್ಲಿ. ಹರಿಬಿಟ್ಟಿದ್ದರು, ಈಗ ಮತ್ತೊಂದು ಸುದ್ದಿ ವೈರಲ್ ಆಗ್ತಾ ಇದೆ ,ಅದೆನಂದರೆ ಡೆವಿಲ್ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದ್ದಾರೆ .ಎಂಬ ವಿಷಯವನ್ನು ಸೋಶಿಯಲ್ ಮಿಡಿಯಾದಲ್ಲಿ. ಹಾಕುತ್ತಿದ್ದಾರೆ. ಈ ವಿಚಾರವಾಗಿ ಮೇಲ್ಕಂಡ ಯಾವುದೇ ವಿಷಯಗಳು ಡೆವಿಲ್ ಚಿತ್ರತಂಡದ ಅಧಿಕೃತ ಮಾಹಿತಿ ಇಲ್ಲ, ಪೆಬ್ರವರಿ 16ರಂದು ದಶ೯ನ್ ರವರ ಹುಟ್ಟು ಹಬ್ಬದ ದಿನದಂದು
ವೈಷ್ಣೊ” ಸ್ಟುಡಿಯೋಸ್ ಸಂಸ್ಥೆಯ ಮೂಲಕವೇ ಅಧಿಕೃತವಾಗಿ “ಡೆವಿಲ್” ಚಿತ್ರದ ಬಗ್ಗೆ ಮಾಹಿತಿ ನೀಡುವುದಾಗಿ ಡೆವಿಲ್ ಚಿತ್ರದ ನಿರ್ದೇಶಕ ಪ್ರಕಾಶ್ ವೀರ್ ತಿಳಿಸಿದ್ದಾರೆ