ಚಿತ್ರದುರ್ಗ : ರಾಮನನ್ನು ಬೀದಿ ಬೀದಿಯಲ್ಲಿ ಬಿಜೆಪಿಯವರು ಆಟ ಆಡಿಸಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ವ್ಯಂಗ್ಯವಾಡಿದ್ದಾರೆ.
ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ನಿಜವಾಗಳು ರಾಮನ ಶಾಪ ತಟ್ಟಲಿದೆ. ರಾಮ ನಮ್ಮ ನಿಮ್ಮ ಹೃದಯದಲ್ಲಿದ್ದಾನೆ. ನಮ್ಮ ಹಣೆಬರಹದಲ್ಲಿ ಯಾವಗ ಬರೆದಿರುತ್ತದೆ ಆಗ ಅಯೋಧ್ಯೆಗೆ ಹೋಗಿ ರಾಮನ ದರ್ಶನ ಮಾಡುತ್ತೇವೆ. ಅಯೋಧ್ಯೆಗೆ ಹೋಗಿರದ ಬಿಜೆಪಿಯವರು ರಾಮದ್ರೋಹಿಗಳಾ? ದೇಶದ ದೊಡ್ಡ ದೊಡ್ಡ ಮನುಷ್ಯರನ್ನು ಬ್ಯಾರಿಕೃಡ್ ಬಳಿ ನಿಲ್ಲಿಸಿದ್ದಾರೆ. ಅಲ್ಲಿನ ಸ್ಥಿತಿ ನೆನೆದು ಕೈಮುಗಿದು ನಮಃ ಶಿವಾಯ ಅಂತಾ ಹೇಳಿದ್ದಾರೆ ಎಂದು ಹೇಳಿದರು.
ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ಅಡ್ಡಿ ಕುರಿತು ಮಾತನಾಡಿದ ಅವರು, ಕಿತಾಪತಿ ಮಾಡುವುದರಲ್ಲಿ ಬಿಜೆಪಿ ನಂಬರ್ ಒನ್. ಒಳ್ಳೆಯದು ನಡೆದಿದೆ ಎಂದಾಗ ಹೋಗೆ ಮಾಡುವುದು ಹೊಸದೆನಲ್ಲಾ. ಗಾಂಧಿ ಕುಟುಂಬ ತ್ಯಾಗ , ಬಲಿದಾನ ಮಾಡಿದೆ ರಾಹುಲ್ ಗಾಂಧಿ ಯಾತ್ರೆ ಮೇಲೆ ಕಲ್ಲು ತೂರಾಟದಿಂದ ಅವರ ಕೆಟ್ಟ ಬುದ್ದಿ ತೋರಿಸಿದ್ದಾರೆ. ಅಧಿಕಾರದಲ್ಲಿ ಇರುವಾಗ ತುಂಬಾ ಜವಾಬ್ದಾರಿ ಇರಬೇಕು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಬಿಜೆಪಿ ಕುರಿತು ಪ್ರತಿಕ್ರಿಯಿಸಿದ, ಬೇರೆ ಧರ್ಮಕ್ಕೆ ಗೌರವ ಕೊಡುವವರು ನಿಜವಾದ ಹಿಂದೂಗಳು. ಹಿಂದೂ ಎಂದು ಹೇಳಿಕೊಳ್ಳುವುದು ಬೇಡ. ಅದು ನಮ್ಮ ಬ್ಲಡ್, ನಮ್ಮ ಮಾತಲ್ಲಿದೆ. ಧರ್ಮದ ಹೆಸರಲ್ಲಿ ರಾಜಕಾರಣ ಒಳ್ಳೆಯ ಪದ್ಧತಿ ಅಲ್ಲ. ಅಂಬೇಡ್ಕರ್ ಅವರ ಸಂವಿಧಾನವೇ ನಮ್ಮ ದೇಶದ ದೇವರು. ಮನೆತನಕ್ಕೆ ಮತ್ತು ಪಕ್ಷಕ್ಕೆ ದೇವರನ್ನು ಅಡ ಇಡಬಾರದು. ನೀವು ರಾಮನ ಭಕ್ತರು ಎಂದರೆ ಬೇರೆಯವರರು ವಿರೋಧವೇ? ನಾವು ಎಲ್ಲಾ ಧರ್ಮ ಮತ್ತು ಎಲ್ಲಾ ದೇವರ ಭಕ್ತರು ಎಂದು ಟಾಂಗ್ ಕೊಟ್ಟರು.