ರಾಜ್ಯ

ಶಾಸಕ ಬಿಜಿ ಗೋವಿಂದಪ್ಪ ವಿರುದ್ಧ ಗೂಳಿಹಟ್ಟಿ ಗುಟುರು

ಚಿತ್ರದುರ್ಗ: ಇತ್ತಿಚೆಗಷ್ಟೇ ಮಹಾರಾಷ್ಟ್ರದ ನಾಗಪುರದ ಹೆಗಡೇವಾರ್ ವಸ್ತು ಸಂಗ್ರಹಾಲಯ ಒಳಗಡೆ ಪ್ರವೇಶ ನೀಡಿಲ್ಲ ಎಂಬ ಹೇಳಿಕೆಯ ಆಡಿಯೋ ವೈರಲ್ ಆಗಿದ್ದು, ಇದು ಮಾಜಿ ಶಾಸಕ ಗೂಳಿಹಟ್ಟಿ ಅವರದ್ದೇ ಮತ್ತೊಂದು ಆಡಿಯೋ ವೈರಲ್ ಆಗಿದೆ. ಈ ಆಡಿಯೋದಲ್ಲಿ ಗೂಳಿಹಟ್ಟಿ ಶೇಖರ್ ಅವರು ಹೊಸದುರ್ಗ ಹಾಲಿ ಶಾಸಕ ಬಿ.ಜಿ.ಗೋವಿಂದಪ್ಪ ಮತ್ತು ಜಿಲ್ಲಾಧಿಕಾರಿ ದಿವ್ಯಪ್ರಭು ವಿರುದ್ಧ ಗರಂ ಗುಡುರುಹಾಕಿದ್ದಾರೆ. ಈ ಆಡಿಯೋ ಇದೀಗ ಎಲ್ಕೆಡೆ ವೈರಲ್ ಆಗುತ್ತಿರುವುದರ ಜೊತೆಗೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ನಾನು ಆಡಳಿತ ಪಕ್ಷದ ಶಾಸಕನಾಗಿದ್ದಾಗ ನನಗೆ ಸಾಕಷ್ಟು ಕಿರಿಕಿರಿ ಕೊಟ್ಟಿದ್ದಾರೆ. ಪ್ರತಿ ಹೆಜ್ಜೆ ಹೆಜ್ಜೆಗೂ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ. ಆದರೆ ಈಗ ನಾನು ಹಾಗೆ ಮಾಡುತ್ತಿಲ್ಲ. ನಮ್ಮ ಹುಡುಗನನ್ನು ಪೊಲೀಸರು ಹೊಡೆದು ಹೊಡೆದು ಸಾಯಿಸಿದರು. ಹಿಂದೆ ಲೇಔಟ್‌ಗೆಲ್ಲಾ ಮಣ್ಣು ಹೊಡೆದಿದ್ದರು. ಡಿಸಿ ದಿವ್ಯಾ ಮೇಡಂ ತುಂಬಾ ಸ್ಟ್ರಿಕ್ಟ್ ಎಂದಿದ್ದಾರೆ.

ಡಿಸಿ ಬಗ್ಗೆ ಮಾತನಾಡಿರುವ ಮಾತುಗಳಲ್ಲಿ, ಡಿಸಿ ದಿವ್ಯ ಮೇಡಂ ಅವರಿಗೆ ಹೊಸದುರ್ಗದಿಂದ ಫೋನ್ ಮಾಡಿ ದೂರು ನೀಡುತ್ತಿದ್ದರು. ಡಿಸಿ ಮೇಡಂ ಸ್ಟ್ರಿಕ್ಟ್ ಆಫೀಸರ್. ದೂರು ಕೊಟ್ಟ ಮೇಲೆ ಅಲ್ಲಿಂದ ಕಳುಹಿಸಿ, ಕೇಸ್ ಮಾಡಿಸಿದರು. ಲೇಔಟ್‌ಗಳಿಗೆ ಈಗಲೂ ಮಣ್ಣು ಹೊಡೆಯುತ್ತಿದ್ದಾರೆ. ಆದರೆ ಡಿಸಿ ಮೇಡಂಗೆ ಒಂದೇ ಒಂದು ಟ್ರ್ಯಾಕ್ಟರ್ ಹಿಡಿಸುವುದಕ್ಕೂ ಆಗುತ್ತಿಲ್ಲ ಎಂಬ ಮಾತುಗಳು ಆಡಿಯೋದಲ್ಲಿ ಕೇಳಿ ಬರುತ್ತಿದೆ. ಈಗಾಗಲೇ ಈ ಆಡಿಯೋ ಎಲ್ಲೆಡೆ ವೈರಲ್ ಆಗಿದೆ.

ಹಿಂದೆ ನಾವಿದ್ದಾಗ ಹೇಗೆ ಸ್ಟ್ರಿಕ್ ಮಾಡುತ್ತಿದ್ದೀರೋ ಈಗಲೂ ಹಾಗೇ ಮಾಡಿ. ಸಾಧ್ಯವಾದರೆ ಮಾಡಿ, ಇಲ್ಲ ಅಂದ್ರೆ ಆಡಳಿತ ಪಕ್ಷದವರ ಜೊತೆ ಹೊಂದಿಕೊಂಡು ಹೋಗುವುದಾದರೆ ನಮ್ಮದೇನು ಅಭ್ಯಂತರ ಇಲ್ಲ ಎಂದಿದ್ದಾರೆ.

Comments (0)

Your email address will not be published. Required fields are marked *

Back to top button