ಚಿತ್ರದುರ್ಗ : ವಾಟರ್ ಟ್ಯಾಂಕ್ ಡೆಮಾಲಿಶ್ ವಿಚಾರಕ್ಕೆ ಹೊಳಲ್ಕೆರೆಯಲ್ಲಿ ಪುರಸಭೆ ಸದಸ್ಯರು ಹಾಗೂ ಬೆಂಬಲಿಗರ ಮದ್ಯೆ ಗಲಾಟೆ ನಡೆದಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಪಟ್ಟಣದಲ್ಲಿ ನಡೆದಿದೆ.
ಹೊಳಲ್ಕೆರೆ ಪುರಸಭೆ 12 ನೇ ವಾರ್ಡಿನ ಸದಸ್ಯ ಕೆ.ಸಿ ರಮೇಶ್, 14 ನೇ ವಾರ್ಡಿನ ಸದಸ್ಯೆ ಸುಧಾ ಬಸವರಾಜ್ ಗುಂಪಿನ ಮದ್ಯೆ ಮಾರಾಮಾರಿ ನಡೆದಿದೆ. ಎರಡು ಗುಂಪುಗಳ ನಡುವೆ ಹೊಡೆದಾಡಿಕೊಂಡಿರುವ ವೀಡಿಯೋ ವೈರಲ್ ಆಗಿದೆ.
14 ನೇ ವಾರ್ಡಿನ ವ್ಯಾಪ್ತಿಯಲ್ಲಿರುವ ಸರ್ಕಾರಿ ವಾಟರ್ ಟ್ಯಾಂಕ್ ಡೆಮಾಲಿಶ್ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಿ ಗಲಾಟೆ ನಡೆದಿದೆ. ಕೆಲ ದಿನಗಳ ಹಿಂದೆ ನಡೆದ ಘರ್ಷಣೆ ವೀಡಿಯೊ ವೈರಲ್ ಆಗಿದ್ದು, ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.