ಚಿಕ್ಕೋಡಿ : ಗಂಡನ ಬಿಟ್ಟು ವಿವಾಹಿತ ಪುರುಷನೊಂದಿಗೆ ಮಹಿಳೆ ಓಡಿಹೋಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಜಿನರಾಳ ಗ್ರಾಮದಲ್ಲಿ ನಡೆದಿದೆ. ದುಂಡಾಪ್ಪ ವಾಲಿಕರ (37)ನ ಹೆಂಡತಿ ರೇಣುಕಾ ವಾಲಿಕರ ಎಂಬುವ ಮಹಿಳೆ ಲಗಮ ವಾಲಿಕರ (35) ಎಂಬ ವಿವಾಹಿತ ಪುರುಷನೊಂದಿಗೆ ಓಡಿಹೋಗಿದ್ದಾರೆ. ಈ ಪ್ರೇಮ ಸಂಬಂಧ ತಿಳಿದ ಮಹಿಳೆಯ ಪತಿ ದುಂಡಪ್ಪ ವಿವಾಹಿತ ಪುರುಷ ಲಗಮ ಮನೆ ಹಾಗೂ ಸಾಮಾಗ್ರಿಗಳನ್ನು ಧ್ವಂಸಗೊಳಿಸಿದರು.
ಕಳೆದ ಎರಡು ದಿನಗಳಿಂದ ಈ ಜೋಡಿ ನಾಪತ್ತೆಯಾಗಿದ್ದರು. ರೇಣುಕಾ 10 ವರ್ಷ ಗಂಡ ದುಂಡಾಪ್ಪನ ಜೊತೆ ಸಂಸಾರ ಮಾಡಿ ಇವರು ಪುತ್ರನನ್ನು ಹೊಂದಿದ್ದರು. ಈ ಲಗಮ ಕೂಡ ವಿವಾಹಿತನಾಗಿದ್ದನು. ರೇಣುಕಾ-ಲಗಮ ಮಧ್ಯೆ ಅಕ್ರಮ ಸಂಬಂಧದ ಬಗ್ಗೆ ಮಾಹಿ ತಿಳಿದ ರೇಣುಕಾ ಗಂಡನ ಮನೆಯವರು ಲಗಮ ಮನೆಯ ಮೇಲೆ ಹಲ್ಲೆ ಮಾಡಿದ್ದಾರೆ.
ಲಗಮನ ಮನೆಯ ಕಿಟಕಿ ಮನೆಯ ವಸ್ತುಗಳು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.