Friday, August 22, 2025
24.8 C
Bengaluru
Google search engine
LIVE
ಮನೆರಾಜ್ಯರಾಮ ಮಂದಿರಕ್ಕೆ ಬಾಂಬ್ ಬೆದರಿಕೆ ಪ್ರಕರಣ : ಅಮಿತ್​​ ಶಾಗೆ ಪತ್ರ ಬರೆದ ಶಶಿಕಲಾ ಜೊಲ್ಲೆ

ರಾಮ ಮಂದಿರಕ್ಕೆ ಬಾಂಬ್ ಬೆದರಿಕೆ ಪ್ರಕರಣ : ಅಮಿತ್​​ ಶಾಗೆ ಪತ್ರ ಬರೆದ ಶಶಿಕಲಾ ಜೊಲ್ಲೆ

ಚಿಕ್ಕೋಡಿ: ಅಲ್ಲಾ ಹು ಅಕ್ಬರ್ ಎಂಬ ತಲೆಬರಹದಡಿ ಅನಾಮದೇಯ ಪತ್ರಗಳ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ. ನಿಪ್ಪಾಣಿಯ ರಾಮಮಂದಿರದಲ್ಲಿ ಬಾಂಬ್ ಬೆದರಿಕೆಯ ಎರಡು ಪತ್ರಗಳನ್ನು ಇಡಲಾಗಿತ್ತು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿರುವ ರಾಮ ಮಂದಿರವು 101 ವರ್ಷಗಳ ಇತಿಹಾಸವುಳ್ಳ ಮಂದಿರವನ್ನು ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಪತ್ರಗಳನ್ನು ಅನಾಮದೇಯ ವ್ಯಕ್ತಿ ಇಟ್ಟುಹೋಗಿದ್ದ.


ಈ ಹಿನ್ನೆಲೆ ಸೆಂಟ್ರಲ್ ಹೋಂ ಮಿನಿಸ್ಟರ್ ಅಮಿತ್​ ಶಾಗೆ ಪತ್ರ ಬರೆದ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಜೊತೆಗೆ ರಾಜ್ಯದ ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗ ರೆಡ್ಡಿ, ಗೃಹ ಸಚಿವರಾದ ಜಿ. ಪರಮೇಶ್ವರ ಹಾಗೂ ಮುಖ್ಯಮಂತ್ರಿ ಸಿದ್ದರಾಮ್ಯಯನವರಿಗೂ ಇ-ಮೇಲ್ ಮೂಲಕ ಮನವಿ ಮಾಡಿದರು. ಶಾಸಕಿ ಪತ್ರದಲ್ಲಿ ಕರ್ನಾಟಕದ ಹಿಂದೂ ದೇವಾಲಯಗಳಿಗೆ ರಕ್ಷಣೆ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ನಿಪ್ಪಾಣಿಯ ರಾಮ ಮಂದಿರದ ಬೆದರಿಕೆ ಪತ್ರಗಳ ಪ್ರಕರಣ ಗಂಭೀರತೆ ಕುರಿತು ಕೇಂದ್ರದ ಗಮನಕ್ಕೆ ತಂದಿದ್ದಾರೆ. ಬೆದರಿಕೆ ಪತ್ರ ಬರೆದಿಟ್ಟ ವ್ಯಕ್ತಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments