ಚಿಕ್ಕೋಡಿ : ಅಥಣಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಯಡಿಯೂರಪ್ಪನವರ ವಿರುದ್ಧ ಲಕ್ಷ್ಮಣ ಸವದಿ ಹರಿಹಾಯ್ದಿದ್ದಾರೆ. ಯಡಿಯೂರಪ್ಪಗೆ ಹೆಣ್ಣು ಮಕ್ಕಳ ಕೈಯಲ್ಲಿ ಮಂಗಳಾರತಿ ಮಾಡಿ ಕಳಿಸುತ್ತೇವೆ’ ಎಂದು ಅಥಣಿಯಲ್ಲಿ ಶಾಸಕ ಲಕ್ಷ್ಮಣ ಸವದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪನವರು ಅಧಿಕಾರದಲ್ಲಿ ಇದ್ದಾಗ ವೆಟರನರಿ ಕಾಲೇಜಿಗೆ 125 ಕೋಟಿ ದುಡ್ಡು ಕೇಳಿದ್ದೆ. ಅದಕ್ಕೆ ಉತ್ತರಿಸಿದ ಅವರು ಸವದಿ ಅವರೇ ನನಗೆ ವಿಷ ಕುಡಿಯಲು ದುಡ್ಡು ಇಲ್ಲ ನಿಮಗೆಲ್ಲಿ ದುಡ್ಡು ಕೊಡಲಿ ಎಂದು ಕಾಟಚಾರವಾಗಿ ಉತ್ತರ ನೀಡಿದ್ದರು. ಯಡಿಯೂರಪ್ಪನವರು ಅಥಣಿಗೆ ಬರಲಿ ಹೆಣ್ಣು ಮಕ್ಕಳ ಕೈಯಿಂದ ಮಂಗಳಾರತಿ ಮಾಡುವ ಕೆಲಸ ಮಾಡೋಣ ಎಂದು ಲಕ್ಷ್ಮಣ ಸವದಿ ಕಿಡಿಕಾಡಿದರು.


