ಚಿಕ್ಕೋಡಿ : ಇಂದು ಎಲ್ಲೆಡೆ ಬಣ್ಣದ ಹಬ್ಬದ ಸಂಭ್ರಮ ಮನೆಮಾಡಿತ್ತು. ಆದ್ರೆ ಚಿಕ್ಕೋಡಿ ತಾಲೂಕಿನ ಪುರಸಭೆ ಪಟ್ಟಣದ ಜನತೆಗೆ ಶಾಕ್ ನೀಡಲಾಗಿದೆ. ಹೋಳಿ ಹಬ್ಬದಂದು ಅನಾವಶ್ಯಕವಾಗಿ ನೀರು ಬಳಸದಂತೆ ಪಟ್ಟಣದ ಜನತೆಗೆ ಪುರಸಭೆ ಮನವಿ ಮಾಡಿದೆ.

ಬರಗಾಲ ಇರುವುದರಿಂದ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಕಡಿಮೆ ಆಗಿದೆ. ಮುಂದಿನ ದಿನಗಳಲ್ಲಿ ನೀರಿನ ಅಭಾವ ಉಂಟಾಗಬಹುದು. ಹೀಗಾಗಿ ಹೋಳಿ ಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸುವಂತೆ ಮನವಿ ಮಾಡಿದೆ. ಕಾರಂಜಿ, ಸ್ಪಿಂಕ್ಲರ್ ಹಾಗೂ ಯಾವುದೇ ರೀತಿ ನೀರು ಬಳಸುವ ಬಣ್ಣದ ಉಪಕರಣ ಬಳಸುವಂತಿಲ್ಲ. ಒಣ ಬಣ್ಣ ಬಳಸಿ ಹೋಳಿ ಆಚರಿಸುವಂತೆ ಪುರಸಭೆಯಿಂದ ಕರೆ ನೀಡಿದೆ.


