ಚಿಕ್ಕೋಡಿ : ಸುಂಟರಗಾಳಿ.. ಸುಂಟರಗಾಳಿ.. ಈ ಪದ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಪದೇ ಪದೇ ಕೇಳಿ ಬಂದಿತು. ಕಾರ್ಯಕ್ರಮಕ್ಕೆ ಹಾಕಲಾಗಿದ್ದ ಟೆಂಟ್ ನ ಹೊದಿಕೆಯು ಸುಂಟರ ಗಾಳಿಯಿಂದಾಗಿ ಕಳಚಿ ಬಿದ್ದಿತು. ಇದರಿಂದಾಗಿ, ಜನರು ಎದ್ನೋ ಬಿದ್ನೋ ಅಂತಾ ಎದ್ದು ಓಡಾಡಿದ ಘಟನೆಯೂ ಕಂಡು ಬಂತು.
ಬೆಳಗಾವಿ ಜಿಲ್ಲಾ ಚಿಕ್ಕೋಡಿಯಲ್ಲಿ ಅಯೋಜಿಸಲಾಗಿದ್ದ ಮುಖ್ಯಮಂತ್ರಿ ಸಮಾರಂಭವು ಸುಂಟರಗಾಳಿಯಿಂದಾಗಿ ಅಸ್ತವ್ಯಸ್ತವಾದ ಘಟನೆಯೂ ಜರುಗಿತು. ಹೌದು. ಇಂತಹ ಘಟನೆ ಇಂದು ಚಿಕ್ಕೋಡಿಯಲ್ಲಿ ಜರುಗಿದೆ. ಇದರಿಂದಾಗಿ ಜನರು ಗಾಬರಿಗೊಂಡರು. ಮಹಿಳೆಯರು, ಮಕ್ಕಳ ಹಾಗೂ ಹಲವು ಕಾರ್ಯಕರ್ತರು ಸಮಾರಂಭದಿಂದ ಹೊರ ನಡೆದರು. ಸಮಾರಂಭ ಆಯೋಜಿಸಿದ್ದ ಲಕ್ಷ್ಮಣ ಸವದಿಯವರು , ಸಮಾರಂಭದಿಂದ ಹೊರ ಹೋಗದಂತೆ ಸೂಚಿಸಿದರು. ಮುಖ್ಯಮಂತ್ರಿ ಭಾಷಣ ಮುಗಿಯುವವರೆಗೆ ಯಾರೂ ಕದಲದಂತೆ ಆದೇಶ ಮಾಡಿದರು. ಆಗ ಎದ್ದು ಹೋಗುತ್ತಿದ್ದ ಕೆಲವರು ಅವರ ಮಾತುಗಳಿಗೆ ಬೆಲೆ ನೀಡಿ ಜೀವ ಭಯದಲ್ಲಿ ಕುಳಿತುಕೊಳ್ಳುವಂತಾಗಿತ್ತು.