ಕ್ರಿಕೆಟ್ರಾಜ್ಯಸುದ್ದಿ

ಎತ್ತಿನ ಬಂಡಿ ಓಟದ ಸ್ಪರ್ಧೆಯಿಂದ ಜನರ ಜೀವದ ಜತೆ ಚೆಲ್ಲಾಟ?

ಚಿಕ್ಕೋಡಿ: ಅದು ತಮ್ಮ ನೆಚ್ಚಿನ ನಾಯಕರ ಜನ್ಮ ದಿನ ಆಚರಿಸಲೆಂದು ಹಮ್ಮಿಕೊಳ್ಳಲಾಗಿದ ರೋಚಕ ಎತ್ತಿನ ಬಂಡಿ ಓಟದ ಸ್ಪರ್ಧೆಯನ್ನು ನೋಡಲು ಭಾರಿ ಪ್ರಮಾಣದಲ್ಲಿ ಜನರು ಸೇರಿದ್ದರು. ಆದ್ರೆ, ಈ ವೇಳೆ ಮೈ ಜುಮ್ಮೆನಿಸುವ ಭಾರಿ ದುರ್ಘಟನೆ ಜರುಗಿದೆ. ಇದರಿಂದಾಗಿ ಸಾರ್ವಜನಿಕರು, ಪೊಲೀಸರು ಗಾಯಗೊಳ್ಳುವಂತಾಗಿದೆ. ಎಲ್ಲಿ ಅಂತೀರಾ? ಇಲ್ಲಿದೆ ಅದರ ಸಂಪೂರ್ಣ ವಿವರ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಲಿಕವಾಡ ಗ್ರಾಮದಲ್ಲಿ ಎತ್ತಿನ ಬಂಡಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಇದರಲ್ಲಿ ಮಹಾರಾಷ್ಟ್ರ, ಕರ್ನಾಟಕ ಸೇರಿದಿಂದ ವಿವಿಧೆಡೆಯಿಂದ ಬಂದಿದ್ದ ಲಕ್ಷಾಂತರ ಜನರು ಸೇರಿದ್ದರು. ಇವರ ನಿಯಂತ್ರಣಕ್ಕೆ ಸಾಕಷ್ಟು ಪೊಲೀಸರು ಸಹ ಸೇರಿದ್ದರು. ಈ ವೇಳೆ ಅಚಾತುರ್ಯ ನಡೆದ ಪರಿಣಾಮವಾಗಿ, ಜನರು, ಪೊಲೀಸರ ಮೇಲೆ ಎತ್ತಿನ ಬಂಡಿ ಹರಿದಿದೆ. ಇದರಿಂದಾಗಿ ಓರ್ವ ಎ. ಎಸ್ ಐ ಹಾಗೂ ಜನರಿಗೆ ಎತ್ತಿನ ಬಂಡಿ ಗುದ್ದಿಗೊಂಡು ಹೋಗಿದೆ. ಹೀಗಾಗಿ, ಪೊಲೀಸರು, ಸಾರ್ವಜನಿಕರು ಗಾಯಗೊಂಡಿದ್ದು, ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಲಿಕವಾಡ ಗ್ರಾಮದಲ್ಲಿ ಚಿಕ್ಕೋಡಿ ಎಂ.ಎಲ್.ಸಿ ಪ್ರಕಾಶ ಹುಕ್ಕೇರಿ ಜನ್ಮ ದಿನದ ಅಂಗವಾಗಿ ಈ ಎತ್ತಿನ ಬಂಡಿ ಸ್ಪರ್ಧೆ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಆದರೆ, ಸೂಕ್ತ ಮುನ್ನೆಚ್ಚರಿಕೆ ವ್ಯವಸ್ಥೆಯನ್ನ, ಬ್ಯಾರಿಕೇಡ್ ವ್ಯವಸ್ಥೆಯನ್ನ ಮಾಡಿರಲಿಲ್ಲ ಎನ್ನಲಾಗಿದೆ. ಇದರಿಂದಾಗಿ ಅವಗಡ ಸಂಭವಿಸಿದ್ದು, ಜನರು, ಪೊಲೀಸರು ತೊಂದರೆ ಅನುಭವಿಸುವಂತಾಗಿದೆ. ಸ್ಪರ್ಧೆ ಆಯೋಜಿಸಿದ್ದ ಆಯೋಜಕರು ಜನರ ಜೀವನದ ಜೊತೆ ಚೆಲ್ಲಾಡವಾಡಿರುವುದು, ಅವರ ನಿರ್ಲಕ್ಷದಿಂದಾಗಿ ಇದೀಗ ಜನರು, ಪೊಲೀಸರು ತೊಂದರೆ ಅನುಭವಿಸುವಂತೆ ಆಗಿರುವುದು ವಿಪರ್ಯಾಸ.

Comments (0)

Your email address will not be published. Required fields are marked *

Back to top button