ಚಿಕ್ಕೋಡಿ : ಎತ್ತಿನಗಾಡಿಯ ಶರ್ಯತ್ತು ವೇಳೆಯಲ್ಲಿ ಎತ್ತಿನಗಾಡಿಯ ನಿಯಂತ್ರಣ ತಪ್ಪಿ ಬಾವಿಗೆ ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮುಗಳಿ ಗ್ರಾಮದಲ್ಲಿ ನಡೆದಿದೆ.
ಖಜಗೌಡನಹಟ್ಟಿ ಗ್ರಾಮದ ಶ್ರೀ ರೇಣುಕಾ ದೇವಿಯ ಜಾತ್ರಾಮಹೋತ್ಸವ ಅಂಗವಾಗಿ ಎತ್ತಿನಗಾಡಿಯ ಶರ್ಯತ್ತು ಆಯೋಜಿಸಲಾಗಿತ್ತು. ಎತ್ತಿನಗಾಡಿಯಗಳು ನಾ ಮುಂದೆ ನೀ ಮುಂದೆ ಎಂದು ಓಡುತ್ತಿದ್ದ ಸಂಧರ್ಭದಲ್ಲಿ ಒಂದು ಎತ್ತಿನ ಗಾಡಿಯ ನಿಯಂತ್ರಣ ತಪ್ಪಿ ಮುಗಳಿ ಗ್ರಾಮದ 30 ಅಡಿಯ ಬಾವಿಯೊಂದಕ್ಕೆ ಹಾರಿದೆ.ಅದೃಷ್ಟವಶಾತ ಎತ್ತುಗಳಿಗೆ ಹಾಗೂ ಎತ್ತುಗಳನ್ನು ಓಡಿಸುತ್ತಿದ್ದ ಮಾಲಿಕನಿಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಬಾವಿಗೆ ಬಿದ್ದ ಎತ್ತುಗಳನ್ನು ಕ್ರೇನ್ ಮೂಲಕ ಸುರಕ್ಷೀತವಾಗಿ ಹೋರತೆಯಲಾಯಿತು. ಚಿಕ್ಕೋಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.