Wednesday, April 30, 2025
24 C
Bengaluru
LIVE
ಮನೆರಾಜಕೀಯತಲಕಾಯಲ ಬೆಟ್ಟದಲ್ಲಿ ಭಕ್ತರ ನೆರವಿಗೆ ಧಾವಿಸಿದ ಸೀಕಲ್‌ ರಾಮಚಂದ್ರಗೌಡ

ತಲಕಾಯಲ ಬೆಟ್ಟದಲ್ಲಿ ಭಕ್ತರ ನೆರವಿಗೆ ಧಾವಿಸಿದ ಸೀಕಲ್‌ ರಾಮಚಂದ್ರಗೌಡ

ಚಿಕ್ಕಬಳ್ಳಾಪುರ : ಬೇಸಿಗೆ ಮೊದಲೇ ರಾಜ್ಯದಲ್ಲಿ ಬರ ತಾಂಡವವಾಡುತ್ತಿದೆ.ಅದ್ರಲ್ಲೂ ಬಯಲು ಸೀಮೆ ಪ್ರದೇಶವಾದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸೂರ್ಯ ಅಬ್ಬರಿಸುತ್ತಿದ್ದು,ಬಿಸಿಲ ತಾಪಕ್ಕೆ ಜನ ತತ್ತರಿಸಿದ್ದಾರೆ. ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ .ಜನರ ಸಂಕಷ್ಟ ಅರಿತ ಬಿಜೆಪಿ ಮುಖಂಡ ಸೀಕಲ್‌ ರಾಮಚಂದ್ರಗೌಡ ಅವರ ನೆರವಿಗೆ ಧಾವಿಸಿದ್ದಾರೆ. ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಲಕಾಯಲ ಬೆಟ್ಟದಲ್ಲಿ ನಡೆಯುತ್ತಿರುವ ಶ್ರೀ ಭೂನೀಳಾ ಸಮೇತ ಶ್ರೀಲಕ್ಷ್ಮಿವೆಂಕಟೇಶ್ವರಸ್ವಾಮಿಯ ಶ್ರೀಮತ್‌ ಕಲ್ಯಾಣ ಬ್ರಹ್ಮರಥೋತ್ಸವಕ್ಕೆ ಬರುವ ಭಕ್ತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಎಲ್ಲಾ ವಾಹನ ಮತ್ತು ರಾಸುಗಳ ಪ್ರವೇಶ ಶುಲ್ಕದ ವೆಚ್ಚವನ್ನು ಸ್ವತಃ ಸೀಕಲ್‌ ರಾಮಚಂದ್ರಗೌಡರೇ ಭರಿಸಿದ್ದಾರೆ.ಇಡೀ ವೆಚ್ಚವನ್ನು ಶ್ರೀಬಾಲಾಜಿ ಸೇವಾ ಟ್ರಸ್ಟ್‌ನಿಂದ ಭರಿಸಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷರು ಹಾಗೂ ಬಿಜೆಪಿ ಮುಖಂಡರೂ ಆಗಿರುವ ಸೀಕಲ್ ರಾಮಚಂದ್ರಗೌಡ ತಿಳಿಸಿದರು.

ಪುರಾಣ ಪ್ರಸಿದ್ದಿಯಾದ ತಲಕಾಯಲಬೆಟ್ಟದಲ್ಲಿ ನಡೆಯುತ್ತಿರುವ ಬ್ರಹ್ಮರಥೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಬರುತ್ತಿದ್ದಾರೆ .ನೆರೆಯ ಆಂಧ್ರದಿಂದಲೂ ರಾಸುಗಳು ಹಾಗೂ ಭಕ್ತರು ಆಗಮಿಸುತ್ತಿದ್ದಾರೆ.ಸಾವಿರಾರು ವಾಹನಗಳು, ಹಾಗೂ ರಾಸುಗಳ ಪ್ರವೇಶ ಶುಲ್ಕವನ್ನು ಉಚಿತಗೊಳಿಸಲಾಗಿದೆ ಎಂದಿರುವ ಸೀಕಲ್‌ ರಾಮಚಂದ್ರಗೌಡ ಎಲ್ಲಾ ವೆಚ್ಚವನ್ನು ತಾವೇ ಸರ್ಕಾರಕ್ಕೆ ಪಾವತಿಸಿದ್ದಾರೆ. ಶ್ರೀ ಬಾಲಾಜಿ ಸೇವಾ ಟ್ರಸ್ಟ್‌ನಿಂದ ವಾಹನ ಮತ್ತು ರಾಸುಗಳ ಪ್ರವೇಶ ಶುಲ್ಕವನ್ನು ದೇವಾಲಯದ ಸಮಿತಿಗೆ ಮುಂಗಡವಾಗಿಯೇ ಪಾವತಿಸಿದ್ದಾರೆ.ಪರಿಷೆಗೆ ಬರುವ ಎಲ್ಲ ರೈತರು ಮತ್ತು ಭಕ್ತರು ತಮ್ಮ ವಾಹನಗಳಿಗೆ ಯಾವುದೇ ರೀತಿಯ ಶುಲ್ಕವನ್ನು ಪಾವತಿಸಬೇಡಿ ಎಂದು ಈ ಹಿಂದೆ ತಿಳಿಸಿದ್ದರಿಂದ ಜಾತ್ರೆಗೆ ಬಂದವರು ಯಾರು ಪ್ರವೇಶ ಶುಲ್ಕ ಪಾವತಿಸಿಲ್ಲ. ನಾಡಿನಲ್ಲಿ ಇದೀಗ ಬರಗಾಲ ಬೀಡು ಬಿಟ್ಟಿದೆ. ಅದರಲ್ಲೂ ರೈತರು ಸಂಕಷ್ಟದಲ್ಲಿದ್ದಾರೆ. ಸಾವಿರಾರು ಮಂದಿ ಭಕ್ತರು ಭಗವಂತನ ದರ್ಶನಕ್ಕಾಗಿ ಬರುತ್ತಿದ್ದು.ಅವರೆಲ್ಲರಿಗೂ ಸಣ್ಣ ಸಹಾಯ ಆಗಲಿ ಎಂದು ಈ ಪ್ರವೇಶವನ್ನು ಉಚಿತಗೊಳಿಸಿದ್ದು, ಎಲ್ಲರೂ ಸದುಪಯೋಗಪಡಿಸಿಕೊಳ್ಳಿ ಎಂದು ಸೀಕಲ್‌ ರಾಮಚಂದ್ರಗೌಡ ಮನವಿ ಮಾಡಿದ್ದಾರೆ ಅಲ್ಲದೇ ಭಗವಂತನ ಆಶೀರ್ವಾದ ಎಲ್ಲರಿಗೂ ಸಿಗಲಿ,ಈ ವರ್ಷ ಚೆನ್ನಾಗಿ ಮಳೆ ಬೆಳೆ ಆಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.

ಸೀಕಲ್‌ ರಾಮಚಂದ್ರಗೌಡ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜನರ ಗಮನ ಸೆಳೆದಿದ್ದರು.ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮಾಡುವ ಮೂಲಕ ಜನರ ಮನಸ್ಸು ಗೆದ್ದಿದ್ರು. ಫಲಿತಾಂಶದ ಬಳಿಕವೂ ಕ್ಷೇತ್ರದ ಜನತೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಅವರ ಕುಂದು ಕೊರತೆಗಳಿಗೆ ಸ್ವಂದಿಸುತ್ತಿದ್ದಾರೆ.ಯಾರೇ ಕಷ್ಟ ಎಂದು ತಮ್ಮ ಬಳಿ ಬಂದರೂ ನೆರವು ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ..ಆ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.ಇದೀಗ ತಲಕಾಯಲಬೆಟ್ಟದಲ್ಲಿ ನಡೆಯುತ್ತಿರುವ ಬ್ರಹ್ಮರಥೋತ್ಸವಕ್ಕೆ ಬರುವ ಭಕ್ತರ ವಾಹನಗಳಿಗೆ ಮತ್ತು ರೈತರ ರಾಸುಗಳಿಗೆ ಪ್ರವೇಶ ಶುಲ್ಕವನ್ನ ತಾವೇ ಪಾವತಿಸುವ ಮೂಲಕ ಸೀಕಲ್‌ ರಾಮಚಂದ್ರಗೌಡ ತಾವು ಜನಪರ ನಾಯಕನೆಂದು ಸಾಬೀತುಪಡಿಸಿದ್ದಾರೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments