ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಕೋಚಿಮುಲ್ ನಿರ್ದೇಶಕ ಅಶ್ವತನಾರಾಯಣ ಬಾಬು ಅವರ ಚಿಂತಾಮಣಿಯ ನಿವಾಸದ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಉಲವಾಡಿ ಗ್ರಾಮದ ನಿವಾಸ ಹಾಗೂ ಚಿಂತಾಮಣಿ ನಗರದ ಪ್ರಭಾಕರ್ ಲೇಔಟ್ನ ಮನೆ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಚಿಂತಾಮಣಿ ತಾಲೂಕಿನ ಅಶ್ವತ್ ನಾರಾಯಣ ಬಾಬು ಕೋಚಿಮುಲ್ ನಿದೇರ್ಶಕರಾಗಿದ್ದಾರೆ. ಎರಡು ಬಾರಿ ಪಕ್ಷೇತರವಾಗಿ ( ಡಾ.ಎಂ.ಸಿ. ಸುಧಾಕರ್ ಬಣ) ಕೋಚಿಮುಲ್ ನಿರ್ದೇಶಕರಾಗಿದ್ದಾರೆ.