ರಾಜ್ಯಸುದ್ದಿ

ಮದುವೆ ಸಮಾರಂಭದಲ್ಲಿ ಮೋದಿ ಪೋಸ್ಟರ್ ಹಿಡಿದು ಅಭಿಮಾನ ಮರೆದ ಜೋಡಿ

ಚಾಮರಾಜನಗರ : ಗಡಿಜಿಲ್ಲೆಯಲ್ಲಿ ನವ ದಂಪತಿಗಳು ಮದುವೆಯಲ್ಲಿ ಮೋದಿ ಪರ ಪ್ರಚಾರ ಮಾಡಿದ್ದಾರೆ. ಮೋದಿ ಪೋಸ್ಟರ್ ಹಿಡಿದು ಲೋಕಸಭಾ ಚುನಾವಣೆಯಲ್ಲಿ ಮೋದಿ ಬೆಂಬಲಿಸುವಂತೆ ಮನವಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಭವ್ಯ ಭಾರತಕ್ಕಾಗಿ ಮತ್ತೊಮ್ಮೆ ಮೋದಿ ಎನ್ನುವ ಪೋಸ್ಟರ್ ಅಭಿಯಾನದೊಂದಿಗೆ ಮದುವೆಗೆ ಬಂದ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಮನವಿ ಮಾಡಿದ್ದಾರೆ. ಚಾಮರಾಜನಗರದ ಶಿವು ವಿರಾಟ್ ಹಾಗೂ ಚೈತ್ರ ಜೋಡಿ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರದ ನಿರೀಕ್ಷೆ ಇಟ್ಟುಕೊಂಡಿದ್ದಾರೆ‌.

ಚಾಮರಾಜನಗರದ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಯಲ್ಲಿ ಮೋದಿ ಪರ ಪೋಸ್ಟರ್ ಅಭಿಯಾನ ನಡೆಸಿದ್ದು, ಸದ್ಯ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಆಗಿರುವ ಶಿವು ವಿರಾಟ್ ಮೋದಿ ಮೇಲೆ ತಮಗಿರುವ ಅಭಿಮಾನ ವ್ಯಕ್ತಪಡಿಸಿದ್ದಾರೆ.

 

Comments (0)

Your email address will not be published. Required fields are marked *

Back to top button