ಚಾಮರಾಜನಗರ: ವಿದೇಶಿ ಕರೆನ್ಸಿಗಳೂ ಸೇರಿದಂತೆ ಜನವರಿ ತಿಂಗಳಲ್ಲಿ ಮಲೆ ಮಹದೇಶ್ವರ ಬೆಟ್ಟಕ್ಕೆ ಎರಡು ಕೋಟಿಗೂ ಅಧಿಕ ಆದಾಯ ಹರಿದು ಬಂದಿದೆ.
ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನಲ್ಲಿರುವ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, 78 ಗ್ರಾಂ ಚಿನ್ನಾಭರಣ, 2kg 350ಗ್ರಾಂ ತೂಕದ ಬೆಳ್ಳಿಯ ವಸ್ತುಗಳು ಹಾಗು ಬರೋಬ್ಬರಿ 2 ಕೋಟಿ 16 ಲಕ್ಷ 34 ಸಾವಿರದ 614 ರೂಪಾಯಿ ಹಣ ಸಂಗ್ರಹವಾಗಿದೆ.
ವಿಶೇಷವೆಂದರೆ ಹುಂಡಿಯಲ್ಲಿದ್ದ ಹಣ ಎಣಿಸುವ ವೇಳೆ ಅಫ್ಘಾನಿಸ್ತಾನ, ನೇಪಾಳ, ಮಲೇಶಿಯಾ, ಅಮೇರಿಕಾ ಡಾಲರ್ ಸೇರಿದಂತೆ ವಿವಿಧ ದೇಶಗಳ ಕರೆನ್ಸಿ ಪತ್ತೆಯಾಗಿದ್ದು, ಅಪಮೌಲ್ಯಗೊಂಡಿರುವ 2000 ಮುಖ ಬೆಲೆಯ 12 ನೋಟುಗಳು ಹುಂಡಿಯಲ್ಲಿ ಸಿಕ್ಕಿರುವ ಬಗ್ಗೆ ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಮಾಹಿತಿ ನೀಡಿದ್ದಾರೆ.