ಚಾಮರಾಜನಗರ : ಅಭಯಾರಣ್ಯದ ನಾಡು ಗಡಿಜಿಲ್ಲೆ ಚಾಮರಾಜನಗರದಲ್ಲಿ ದಿನನಿತ್ಯ ಬಿಸಿಲಿನ ತಾಪ 37° ದಾಟುತ್ತಿದ್ದು, ರಾಷ್ಟ್ರೀಯ ಪ್ರಾಣಿ ಹುಲಿರಾಯನಿಗೂ ಬೇಸಿಗೆ ಬಿಸಿಲಿನ ತಾಪ ಹೆಚ್ಚಾಗಿದೆ. ಬಿಸಿಲ ಬೇಗೆ ತಾಳಲಾರದೆ ಬಂಡೀಪುರದ ಕಾಡಿನಲ್ಲಿ ಹುಲಿರಾಯ ನೀರಿಗಿಳಿದು ವಿಶ್ರಮಿಸುತ್ತಿದ್ದಾನೆ. ಸುಡುಸುಡು ಬಿಸಿಲಿನ ನಡುವೆ ಕೆರೆಯಲ್ಲಿ ಕೂಲ್ ಕೂಲ್ ಆದ ಹುಲಿರಾಯನನ್ನು ಕಂಡು ಸಫಾರಿಗೆ ತೆರಳಿದ್ದ ಪ್ರವಾಸಿಗರು ಪುಳಕಿರತಾಗಿದ್ದಾರೆ. ನೀರಿನಲ್ಲಿ ಕುಳಿತು ಹುಲಿ ರಿಲ್ಯಾಕ್ಸ್ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ..