ರಾಜ್ಯಶಿಕ್ಷಣಸುದ್ದಿ

ಮಹಿಳಾ ದಿನದ ವಿಶೇಷ ; “ಗಡಿಜಿಲ್ಲೆಯ ಯುವ ಸಾಧಕಿ”

ಚಾಮರಾಜನಗರ: ರಾಷ್ಟ್ರದಲ್ಲಿ ಅದೆಷ್ಟೋ ಅನುಭವಿ ಸಾಹಿತಿಗಳು, ಕವಿಗಳು ಅವಿರತ ಶ್ರಮ ಹಾಕಿದರೂ ಇನ್ನೂ ಅವರು ಬೆಳಕಿಗೆ ಬಂದಿಲ್ಲ, ಆದ್ರೆ ಇಲ್ಲೊಬ್ಬ ಯುವತಿ ತನ್ನ ಹರೆಯದ ವಯಸ್ಸಿನಲ್ಲೇ ತಾನು ಬರೆದ ಕಿರು ಹೊತ್ತಗೆ ಪ್ರಕಟಗೊಳ್ಳುತ್ತಿದ್ದಂತೆಯೇ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪದಕಕ್ಕೆ ಭಾಜನಾಗಿದ್ದಾರೆ.

ಸದಾ ತನ್ನಷ್ಟಕ್ಕೆ ತಾನೇ ಓದುವುದು, ಬರೆಯುವುದರಲ್ಲಿ ಮಗ್ನವಾಗಿರುವ ಈ ಯುವತಿಯ ಹೆಸರು ಅಮೃತಾ.. ಗಡಿ ಜಿಲ್ಲೆ ಚಾಮರಾಜನಗರದ ದೊಡ್ಡಮೋಳೆ ಎಂಬ ಕುಗ್ರಾಮದ ಮಂಜುಳಾ-ಗಣೇಶ್ ದಂಪತಿಗಳ ಪುತ್ರಿಯಾದ ಅಮೃತಾ ಹಿಂದುಳಿದ ವರ್ಗದ ಬಡ ಕುಟುಂಬದಲ್ಲಿ ಜನಿಸಿದ ಯುವ ಪ್ರತಿಭೆ. ಈಕೆ ರಾಷ್ಟ್ರಕ್ಕೆ ಕೊರೊನಾ ಮಹಾಮಾರಿ ಆವರಿಸಿದಾಗ ಉಂಟಾದ ಲಾಕ್ ಡೌನ್ ಸಂದರ್ಭದಲ್ಲಿ ಮನೆಯಲ್ಲಿ ಕುಳಿತಿದ್ದಾಗ, ಈಕೆ ತನ್ನ ನೆಚ್ಚಿನ ಪ್ರಾಥಮಿಕ ಶಾಲೆ ಶಿಕ್ಷಕಿ ಸುಷ್ಮಾಅವರು ನೀಡಿದ ಪ್ರೀತಿ, ಸಲುಗೆ, ಪ್ರೋತ್ಸಾಹ, ಮಾರ್ಗದರ್ಶನದ ಬಗ್ಗೆ ಸ್ಮರಣೆ ಮಾಡುತ್ತಾ ಬರೆದ ಅಕ್ಷರಗಳು ಕವನಗಳಾಗಿ ರೂಪುಗೊಂಡಿತ್ತು, “ನನ್ನ ಗುರುವೆಂಬ ಸುಗಮ” ಎಂಬ ಶೀರ್ಷಿಕೆಯಡಿ ಈಕೆ ಬರೆದ ಗುರುವಿನ ಸನಿಹ ನನ್ನ ಧ್ಯಾನ ಎಂಬ ಅಡಿ ಬರಹದಲ್ಲಿ ಮೂಡಿ ಬಂದಿರುವ 67 ಮುಟಗಳ ಕೃತಿಯಲ್ಲಿ 16 ಕವಿತೆಗಳನ್ನು ಒಳಗೊಂಡಿದ್ದು, ರಾಜಸ್ಥಾನದ ಸಂವನ್ ಪಬ್ಲಿಕೇಷನ್ ಪುಸ್ತಕವನ್ನು ಪ್ರಕಟಿಸಿ ಹೊರ ತಂದಿದೆ. ಅಮೃತಾ ಬರೆದ ಈ ಪುಸ್ತಕ ಈಗಾಗಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರುವ ಮೂಲಕ ಗಡಿಜಿಲ್ಲೆಯ ಯುವತಿ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದು, ತನ್ನ ಈ ಸಾಧನೆಗೆ ಪ್ರೇರಕರಾದ ತನ್ನ ನೆಚ್ಚಿನ ಶಿಕ್ಷಕಿ ಸುಷ್ಮಾ ಅವರನ್ನು ಪ್ರೀತಿಯಿಂದ ಸ್ಮರಿಸಿಕೊಂಡಿದ್ದಾರೆ.

ಸದ್ಯ ಚಾಮರಾಜನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿರುವ ಅಮೃತಾ, ಈಗ ಕಾಲೇಜಿನ ಅಚ್ಚುಮೆಚ್ಚಿನ ವಿದ್ಯಾರ್ಥಿನಿ ಎನಿಸಿಕೊಂಡಿದ್ದಾರೆ, ಕಾಲೇಜಿನಲ್ಲಿ ಸಹಪಾಟಿಗಳು ಈಕೆಯ ಪುಸ್ತಕವನ್ನು ಓದಿ ಮೆಚ್ಚಿಕೊಂಡಿದ್ದು, ಅಮೃತಾಗೆ ಒಲಿದು ಬಂದಿರುವ ಇಂಡಿಯಾ ಬುಕ್ ಆಫ್ ರೆಕಾರ್ಡ್ ನೀಡಿರುವ ಪದಕವನ್ನು ಕಂಡು ಅಭಿನಂದನೆ ಸಲ್ಲಿಸಿದ್ದಾರೆ.

ಒಟ್ಟಾರೆ ಸಾಧನೆ ಎಂಬುದು ಯಾರ ಮನೆಯ ಸ್ವತ್ತೂ ಅಲ್ಲ, ಸಾಧನೆಗೆ ಜಾತಿ, ಧರ್ಮ, ಮೇಲು, ಕೀಳು, ಬಡವ ಬಲ್ಲಿದನೆಂಬ ಬೇಧ ಭಾವ ಅಡ್ಡ ಬರುವುದಿಲ್ಲ, ವಿದ್ಯೆಯ ಕಡೆಗೆ ಗಮನವಿಟ್ಟರೆ ಯಾರು ಬೇಕಾದರೂ ಎಂತಹ ಸಾಧನೆಯನ್ನು ಬೆರಕಾದರೂ ಮಾಡಬಹುದು ಎಂಬುದಕ್ಕೆ ಗಡಿಜಿಲ್ಲೆಯ ಕುಗ್ರಾಮ ಜಿ.ಅಮೃತಾ ಸ್ಪಷ್ಟ ನಿದರ್ಶನವಾಗಿದ್ದು, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಫ್ರೀಡಂ ಟಿವಿ ಬಳಗದಿಂದ ಪ್ರೀತಿಯ ಅಭಿಮಾನಗಳನ್ನು ಸಲ್ಲಿಸುತ್ತಿದ್ದೇವೆ‌.

Comments (0)

Your email address will not be published. Required fields are marked *

Back to top button