
ಬೀದರ್ : ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಸಮಯದಲ್ಲಿ ಪಾರದರ್ಶಕತೆ ಕಾಪಾಡುವ ದೃಷ್ಟಿಯಿಂದ ಇದೇ ಮೊದಲ ಬಾರಿಗೆ ಬೀದರ್ ಪೊಲೀಸರು ಇ-ಚಲನ್ ಮೂಲಕ ದಂಡ ವಿಧಿಸಲು ಮುಂದಾಗಿದ್ದಾರೆ.

ಈ ಹಿಂದೆ ಬೀದರ್ ಪೊಲೀಸರು, ಬುಕ್ ಅಥವಾ ರಶೀದಿ ಮೂಲಕ ದಂಡ ವಿಧಿಸುವ ಸಮಯದಲ್ಲಿ ಪೊಲೀಸರ ಜೊತೆ ವಾಗ್ವಾದ ಸಾಮಾನ್ಯವಾಗಿತ್ತು. ಇದನ್ನ ತಡೆಗಟ್ಟುವ ನಿಟ್ಟಿನಲ್ಲಿ, ಸಂಚಾರಿ ಪೊಲೀಸರಿಗೆ ಬಾಡಿ ಕ್ಯಾಮೆರಾ ಇ-ಚಲನ್ ವಿಧಿಸುವ ಮಷೀನ್ನ್ನು ನೀಡಲಾಗಿದೆ. ಇನ್ನು ಮುಂದೆ ಪೊಲೀಸರು ಇ-ಚಲನ್ ಮೂಲಕ ಸ್ಪಾಟ್ ಪೈನ್ ವಿಧಿಸಿ, ಪೋನ್ ಪೇ, ಸ್ಕ್ಯಾನರ್ ಮೂಲಕ ಅಥವಾ ನಗದು ರೂಪದಲ್ಲಿ, ಸ್ಥಳದಲ್ಲೆ ದಂಡವನ್ನ ವಸೂಲಿ ಮಾಡಲಾಗುತ್ತದೆ.
ಈಗಾಗಲೇ ಜಿಲ್ಲೆಗೆ 54 ಇ-ಚಲನ್ ಮಷೀನ್ ಹಾಗೂ 60 ಬಾಡಿ ಕ್ಯಾಮೆರಾಗಳನ್ನ ನೀಡಲಾಗಿದೆ. ಈ ವೇಳೆ ಮಾತನಾಡಿದ ಎಸ್ಪಿ ಚನ್ನಬಸವಣ್ಣ ಲಂಗೋಟಿ, ಪೇಪರ್ಲೆಸ್ ದಂಡ ವಸೂಲಿ ಮಾಡಬೇಕೆಂಬ ದೃಷ್ಠಿಯಿಂದ ಇ-ಚಲನ್ ಮೂಲಕ ದಂಡ ವಸೂಲಿ ಮಾಡಲಾಗುತ್ತಿದೆ. ಇ ಚಲನ್ ಮಷಿನ್ನಲ್ಲಿ ವಾಹನದ ನಂಬರ್ ಹಾಕಿದ್ರೆ ವಾಹನದ ಮೇಲೆ ಯಾವುದೇ ಉಲ್ಲಂಘನೆ ಮಾಹಿತಿಯೂ ತಿಳಿಯಲಿದ್ದು, ಅದರ ಆಧಾರದ ಮೇಲೆ ವಾಹನ ಸವಾರರಿಗೆ ದಂಡ ವಿಧಿಸಲಾಗುವುದು ಜೊತೆಗೆ ಈ ಒಂದು ಇ -ಚಲನ್ ಕಾರ್ಯಕ್ಕೆ ಪೊಲೀಸರಿಗೆ ಸಾರ್ವಜನಿಕರು ಸಹಕರಿಸಬೇಕು ಎಂದ ಮನವಿ ಮಾಡಿದ್ರು.




