ಬೀದರ್ : ನಗರಸಭೆ ಸಾಮಾನ್ಯ ಸಭೆ ದಿಢೀರ್ ರದ್ದಾದ ಹಿನ್ನೆಲೆ ಬಿಜೆಪಿ, ಜೆಡಿಎಸ್, ಎಮ್ಐಎಮ್ ಹಾಗೂ ಆಫ್ ಸದಸ್ಯರು ಪೌರಾಡಳಿತ ಸಚಿವ ರಹೀಂಖಾನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ನಗರಸಭೆಯ ಸಾಮಾನ್ಯ ಸಭೆ ದಿಢೀರ್ ರದ್ದಾದ ಹಿನ್ನೆಲೆಯಲ್ಲಿ, ಬೀದರ್ ನಗರಸಭೆಗೆ ಬೀಗ ಜಡಿದು ಬಿಜೆಪಿ, ಜೆಡಿಎಸ್, ಎಮ್ಐಎಮ್ ಹಾಗೂ ಆಫ್ ಸದಸ್ಯರು ಪ್ರತಿಭಟನೆಯನ್ನ ನಡೆಸಿದರು. ಇಂದು ನಡೆಯಬೇಕಿದ್ದ ಸಿಎಂಸಿ ಸಾಮಾನ್ಯ ಸಭೆ ದಿಢೀರ್ ರದ್ದಾದ ಹಿನ್ನೆಲೆಯಲ್ಲಿ ಪೌರಾಡಳಿತ ಸಚಿವ ರಹೀಂಖಾನ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಹಾಗೂ ಸದಸ್ಯರ ನಡುವೆ ವಾಗ್ವಾದವೂ ಸಹ ಉಂಟಾಯಿತು. ಇವ್ರು ಮಂತ್ರಿ ಆದ್ಮೇಲೆ ನಗರಸಭೆಯಲ್ಲಿ ಅವ್ಯವಹಾರ ಹೆಚ್ಚಾಗಿದೆ ಎಂದು ಪರೋಕ್ಷವಾಗಿ ರಹೀಂಖಾನ್ ವಿರುದ್ದ ಬಿಜೆಪಿ ಸದಸ್ಯ ಶಶಿ ಹೊಸಳ್ಳಿ ಗಂಭೀರವಾಗಿ ಆರೋಪಿಸಿದರು.
ಪೌರಾಯುಕ್ತರ ಮೇಲೆ ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಮಾರ್ಚ್ ಹದಿಮೂರರಂದು ಸಾಮಾನ್ಯ ಸಭೆ ಕರೆಯುವ ಭರವಸೆ ನೀಡಿದ್ದ ಕಾಂಗ್ರೆಸ್, ಈ ಸಾಲಿನ ಬಜೆಟ್ ಯಾರಿಗೂ ತಿಳಿಸದೆ ಅನುಮೋದನೆಗೊಂಡಿದ್ದರಿಂದ ಸಾಮಾನ್ಯ ಸಭೆ ರದ್ದಾಗಿದ್ದು ಎಂದು ನಗರಸಭೆ ಅಧ್ಯಕ್ಷ ಎಂ.ಡಿ.ಗೌಸ್ ವಿರುದ್ಧ ಬಿಜೆಪಿ ಸದಸ್ಯರ ವಿರುದ್ಧ ಕಿಡಿಕಾರಿದ್ದಾರೆ.