Wednesday, April 30, 2025
34.5 C
Bengaluru
LIVE
ಮನೆಕ್ರೈಂ ಸ್ಟೋರಿಆಸ್ತಿ ವಿವಾದಕ್ಕಾಗಿ ಮುಗಿದು ಹೋದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ

ಆಸ್ತಿ ವಿವಾದಕ್ಕಾಗಿ ಮುಗಿದು ಹೋದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ

ಬೀದರ್ : ಆಸ್ತಿ ವಿವಾದಕ್ಕಾಗಿ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷನನ್ನೆ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೀದರ್ ತಾಲೂಕಿನ ನಿರ್ಣಾ ವಾಡಿ ಗ್ರಾಮದಲ್ಲಿ ನಡೆದಿದೆ.

ಮಲ್ಲಿಕಾರ್ಜುನ ರಾಜಗೀರೆ (48) ಎಂಬಾತ ಕೊಲೆಯಾದ ವ್ಯಕ್ತಿ. ಮೃತ ವ್ಯಕ್ತಿಯ ಮಗ ನೀಲಕಂಠ ರಾಜಗೀರೆಗೆ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಜಮೀನು ಸರ್ವೇ ಸಂಬಂಧ ನಿನ್ನೆ ಗಲಾಟೆ ನಡೆದಿದ್ದು, ಅಧಿಕಾರಿಗಳು ಸರ್ವೇ ಮಾಡಿ ಹೋದ ಬಳಿಕ ಆರಂಭವಾಗಿದ್ದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಲಿಂಗರಾಜ ನಿಂಬೂರೆ, ಜಗದೀಶ್ ನಿಂಬೂರೆ, ವಿರಶೆಟ್ಟಿ ನಿಂಬೂರೆ, ಧನರಾಜ್ ನಿಂಬೂರೆ ಸೇರಿದಂತೆ ಹತ್ತಕ್ಕೂ ಹೆಚ್ಚು ಜನರ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಕೊಡಲಿ, ಕತ್ತಿ, ಕಟ್ಟಿಗೆ ವಿವಿಧ  ಆಯುಧಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.

ಮನ್ನಾಏಖೇಳಿಯ ಅಂಬೇಡ್ಕರ್ ವೃತ್ತದಲ್ಲಿ ಕಲ್ಯಾಣ ಕರ್ನಾಟಕಗೊಂಡ ಸಮಾಜ ಒಕ್ಕೂಟದಿಂದ ಧರಣಿ ನಡೆಸಿದರು. ಮೃತನ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಮನ್ನಾಏಖೇಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ಸಂಬಂಧ ಈಗಾಗಲೇ 6 ಜನರನ್ನ ಪೊಲೀಸರು ಬಂಧಿಸಿದ್ದಾರೆ.  ಇನ್ನುಳದವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

 

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments