ಬೀದರ್ : ರೈತರ ಜಮೀನಿನಲ್ಲಿ ಪಾವರ್ ಗ್ರಿಡ್ ಸ್ಥಾಪನೆ ವಿರೋಧಿಸಿ ರೈತರ ಪ್ರತಿಭಟನೆ ನಡೆಸಿದರು. ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಡೋಗರ್ಗಾಂವ್ ಗ್ರಾಮದ ರೈತರಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಉಳುಮೆ ಮಾಡುವ ರೈತರ ಜಮೀನಿನಲ್ಲಿ ಪಾವರ್ ಗ್ರಿಡ್ ಸ್ಥಾಪನೆ ಮಾಡದಂತೆ ಒತ್ತಾಯಿಸಿದರು.
ಡೊಗರ್‌ಗಾಂವ್ ಗ್ರಾಮಸ್ಥರ ಜಮೀನಿನಲ್ಲಿ ಮಾಡದೇ ಬೇರೆ ಸ್ಥಳದಲ್ಲಿ ಮಾಡುವಂತೆ ಒತ್ತಾಯಿಸಿದ್ರು. ಔರಾದ್ ತಾಲೂಕಿನ ಖಾಲಿ ಇರುವ ಸರ್ಕಾರಿ ಜಮೀನನಲ್ಲಿ ಪಾವರ್ ಗ್ರಿಡ್ ಸ್ಥಾಪನೆ ಮಾಡುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ದ ಗ್ರಾಮಸ್ಥರು ಗ್ರಾಮಸ್ಥರು ಹೊರಹಾಕಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರು ಹಾಗೂ ರೈತ ಮುಖಂಡರು ಭಾಗಿಯಾಗಿದ್ರು. ಜಿಲ್ಲಾಧಿಕಾರಿಗಳ ಮುಖಾಂತರ ಕೇಂದ್ರ ಸರ್ಕಾರಕ್ಕೆ ಗ್ರಾಮಸ್ಥರಿಂದ ಮನವಿ ಮಾಡಿದರು.