ಬೀದರ್ ; ವಿದ್ಯುತ್ ಅವಘಡದಿಂದಾಗಿ ಕಟಾವಿಗೆ ಬಂದಿದ್ದ ಎರಡು ಎಕರೆ ಕಬ್ಬು ಸಂಪೂರ್ಣ ಸುಟ್ಟು ಕರಕಲಾ ಘಟನೆ ಬೀದರ್ ಜಿಲ್ಲೆ ಹುಲಸೂರು ತಾಲೂಕಿನ ಬೇಲೂರು ಗ್ರಾಮದಲ್ಲಿ ನಡೆದಿದೆ.
ಜಮೀನಿನಲ್ಲಿ ಅಳವಡಿಸಿದ ಟ್ರಾನ್ಸ್‌ಪಾರ್ಮರ್‌ನಲ್ಲಿ ಹೊತ್ತಿದ ಕಿಡಿಯಿಂದಾಗಿ ಕಟಾವಿಗೆ ಬಂದಿದ್ದ ಕಬ್ಬು ಸುಟ್ಟು ಕರಕಲಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲಾ ಎಂದು ರೈತನ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಟ್ರಾನ್ಸ್‌ಪಾರ್ಮರ್ ಬದಲಾಯಿಸುವಂತೆ ಹಲವು ಬಾರಿ ಮನವಿ ಮಾಡಿಕೊಂಡ್ರು ಜೆಸ್ಕಾಂ ಅಧಿಕಾರಿಗಳು ಬದಲಾಯಿಸದೇ ಬಿಟ್ಟಿದ್ದರಿಂದಲೇ ಈ ರೀತಿ ಆಗುತ್ತಿದೆ ಎಂದು ಅಧಿಕಾರಿಗಳ ವಿರುದ್ದ ಕಿಡಿಕಾರಿದ್ರು.
ಜಮೀನನಲ್ಲಿದ್ದ ಟ್ರಾನ್ಸ್‌ಪಾರ್ಮರ್‌ನಿಂದ ಹೊತ್ತಿದ ಕಿಡಿಯಿಂದಾಗಿ ಎರಡು ಎಕರೆ ಕಬ್ಬು ಸಂಪೂರ್ಣ ಸುಟ್ಟು ಕರಕಲಾಗಿದೆ. ಮೂರು ವರ್ಷಗಳಿಂದ ಇದೇ ರೀತಿ ಕಬ್ಬು ಹಾಳಾಗುತ್ತಿದ್ರು ಅಧಿಕಾರಿಗಳು ಯಾವುದೇ ಪರಿಹಾರ ನೀಡಿಲ್ಲಾ. ಬೆಳೆ ಹಾನಿಗೆ ಪರಿಹಾರ ನೀಡದೆ ಹೋದ್ರೆ ಇದೇ ಟ್ರಾನ್ಸ್‌ಪಾರ್ಮರ್ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ರೈತ ಎಚ್ಚರಿಕೆ ನೀಡಿದ್ದಾರೆ.